Sunday, 28 Feb, 4.05 pm Kannada News Now

ಕರ್ನಾಟಕ
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯನ್ನ ಯೋಗೇಶ್ವರ್ ಸೋಲಿಸ್ತಾರೆ: ಭವಿಷ್ಯ ನುಡಿದ ಡಿಸಿಎಂ

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ ಯೋಗೇಶ್ವರ್​, ಹೆಚ್.‌ ಡಿ ಕುಮಾರಸ್ವಾಮಿಯವರನ್ನ ಸೋಲಿಸುತ್ತಾರೆ ಎಂದು ಡಿಸಿಎಂ ಡಾ.ಅಶ್ವಥ್​ ನಾರಾಯಣ್​ ಭವಿಷ್ಯ ನುಡಿದ್ದಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅಶ್ವಥ್​ ನಾರಾಯಣ್,​ 'ಮುಂದಿನ ಚುನಾವಣೆಯಲ್ಲಿ ಯೋಗೇಶ್ವರ್​ ಜೆಡಿಎಸ್ʼನ ಎದುರಾಳಿ. ಅವರು ಕುಮಾರಸ್ವಾಮಿಯನ್ನ ಸೋಲಿಸುತ್ತಾರೆ. ಕುಮಾರಸ್ವಾಮಿ ವಿರುದ್ಧ ಅವರು ನೀಡಿರುವ ಹೇಳಿಕೆಗಳು ಸ್ಪಷ್ಟವಾಗಿದೆ' ಎಂದಿದ್ದಾರೆ.

ನಾಳೆಯಿಂದ ಭಾರತದಲ್ಲಿ ಎರಡನೇ ಹಂತದ ಕೋವಿಡ್​ ಲಸಿಕೆ ಅಭಿಯಾನ

ಬಿಜೆಪಿಗೆ ಲೈಫ್​ ಕೊಟ್ಟಿದ್ದೇ ನಾನು ಅನ್ನೋ ಕುಮಾರಸ್ವಾಮಿ ಹೇಳಿಕೆ ಡಿಸಿಎಂ ಟಾಂಗ್‌ ನೀಡಿದ್ದು, 'ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಅವರಿಗೂ ಅನುಕೂಲ‌ ಆಯ್ತು. ನಾವು ಅವ್ರಿಗೆ ಬಂಗಾರದ ತಟ್ಟೆಯಲ್ಲಿ ಅಧಿಕಾರವನ್ನ ಕೊಟ್ಟಿದ್ದೇವು. ಆದ್ರೆ, ಬಂಗಾರದ ತಟ್ಟೆಯಲ್ಲಿ ಬಂದಿದ್ದನ್ನ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಆ ಅಧಿಕಾರವನ್ನ ಕುಮಾರಸ್ವಾಮಿ ಕಾಲಲ್ಲಿ ಒದ್ದಿದ್ದರು. ಅದಕ್ಕೆ ನಾವೇನು ಮಾಡೋಕಾಗಲ್ಲ' ಎಂದರು.

ʼLPGʼ ಗ್ರಾಹಕರೇ, ನಿಮಗಿದು ಲಾಸ್ಟ್‌ ಚಾನ್ಸ್‌.. ಗ್ಯಾಸ್‌ ಸಿಲೆಂಡರ್‌ ಮೇಲೆ ʼ700 ರೂ. ರಿಯಾಯಿತಿʼ ಪಡೆಯಲು ಇಂದೇ ಕೊನೆ ದಿನ..!



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top