ದಕ್ಷಿಣಕನ್ನಡ: ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದಂತ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದೇವಸ್ಥಾನಕ್ಕೆ ( Dharmasthala Manjunatha Temple ) ಭಕ್ತರಿಗೆ ನೀಡಲಾಗುತ್ತಿದ್ದಂತ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಈ ಕುರಿತಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಆಡಳಿತ ಸಮಿತಿಯು ಪತ್ರಿಕಾ ಪ್ರಕರಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ನವೆಂಬರ್ 4, 2021ರಿಂದ ದೀಪಾವಳಿಯ ಬಳಿಕ ರಂಗಪೂಜೆ, ಬೆಳ್ಳಿ ರಥೋತ್ಸವ, ಪಲ್ಲಕಿ ಉತ್ಸವ ಸೇರಿದಂತೆ ವಿವಿಧ ಸೇವೆಗಳು ನಡೆಯುವ ಕಾರಣದಿಂದಾಗಿ ಮಂಜುನಾಥನ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಹೀಗಿದೆ.. ಬದಲಾವಣೆಗೊಂಡ ದರ್ಶನ ಸಮಯ
- ಬೀಡಿನಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಬೆಳಿಗ್ಗೆ 9 ರಿಂದ 12, ಸಂಜೆ 4 ರಿಂದ 5 ಹಾಗೂ ರಾತ್ರಿ 7 ರಿಂದ 9ರವರೆಗೆ ಭೇಟಿ ಮಾಡಬಹುದು.
- ಬೆಳಿಗ್ಗೆ 6 ರಿಂದ ಮಧ್ಯಾಹ್ನ 2.30, ಸಂಜೆ 5 ರಿಂದ ರಾತ್ರಿ 8.30ರವರೆಗೆ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಈ ಸಮಯ ವಿಶೇಷ ದಿನಗಳಲ್ಲಿ ವ್ಯತ್ಯಾಸವಾಗೋ ಸಾಧ್ಯತೆ ಕೂಡ ಇದೆ.
- ಇನ್ನೂ ಅನ್ನಪೂರ್ಣ ಛತ್ರದಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಹಾಗೂ ರಾತ್ರಿ 7 ರಿಂದ 9 ಗಂಟೆಯವರೆಗೆ ಭಕ್ತರಿಗೆ ಊಟದ ವ್ಯವಸ್ಥೆ ಇರಲಿದೆ ಎಂದು ತಿಳಿಸಿದೆ.
- ಮಂಜೂಷ ವಸ್ತು ಸಂಗ್ರಹಾಲಯವು ವೀಕ್ಷಕರಿಗಾಗಿ ಬೆಳಿಗ್ಗೆ 9 ರಿಂದ ಸಂಜೆ 5.30ರವರೆಗೆ ತೆರೆದಿರಲಿದೆ. ಕಾರು ಮ್ಯೂಸಿಯಂ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1 ಹಾಗೂ 2 ರಿಂದ 7ರವರೆಗೆ ತೆರೆದಿರಲಿದೆ.
- ಹರಕೆ ಮುಡಿಯ ಸೇವೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 5 ರಿಂದ 7ರವರೆಗೆ ತೆರದಿರಲಿದೆ.
Dharmasthala Manjunatha Temple Darshan Timings

