Monday, 21 Sep, 12.36 pm Kannada News Now

ಹೋಮ್
ಡಿ.ಜೆ. ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣ : ತನಿಖೆಗೆ ಎನ್‌ಐಎ ಎಂಟ್ರಿ

ಬೆಂಗಳೂರು : ಡಿ.ಜೆ. ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರವೇಶ ಕೊಟ್ಟಿದ್ದು, ಗಲಭೆಯ ಬಗ್ಗೆ ಮಾಹಿತಿ ಕಲೆ ಹಾಕಿದೆ.

ಈಗಾಗಲೇ ಡಿಜೆ ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಹಾಗೂ ಡಿ.ಜೆ ಹಳ್ಳಿ ಪೊಲೀಸರು ಆರೋಪಿಗಳ ಪ್ರಾಥಮಿಕ ಮಾಹಿತಿಯನ್ನು ಎನ್ ಐಎ ಗೆ ನೀಡಿದ್ದಾರೆ. ಆರೋಪಿಗಳು ಎಸ್ ಡಿಪಿಐನ ಕಾರ್ಯಕರ್ತರು ಇದ್ದಾರೆ ಎನ್ನುವ ಅನುಮಾನವಿದ್ದು, ಆರೋಪಿಗಳು ಭಯೋತ್ಪಾದಕರ ನಂಟಿನ ಬಗ್ಗೆ ಎನ್ ಐಎ ಮಾಹಿತಿ ಕಲೆ ಹಾಕುತ್ತಿದೆ ಎನ್ನಲಾಗಿದೆ.

ಗಲಭೆ ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು 300 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಪ್ರತಿಯೊಬ್ಬರ ಹಿನ್ನೆಲೆ ಕಲೆ ಹಾಕಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top