Dailyhunt Logo
  • Light mode
    Follow system
    Dark mode
    • Play Story
    • App Story
ಡಿಸೆಂಬರ್ 5 ರ ಕರ್ನಾಟಕ ಬಂದ್ ಖಚಿತ : ವಾಟಾಳ್ ನಾಗರಾಜ್

ಡಿಸೆಂಬರ್ 5 ರ ಕರ್ನಾಟಕ ಬಂದ್ ಖಚಿತ : ವಾಟಾಳ್ ನಾಗರಾಜ್

Kannada News Now 5 years ago

ಹಾಸನ : ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5 ರಂದು ಕರೆ ನೀಡಿರುವ ಕರ್ನಾಟಕ ಬಂದ್ ನೂರಕ್ಕೆ ನೂರರಷ್ಟು ಬಂದ್ ಮಾಡುವುದು ಖಚಿತ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಡಿಸೆಂಬರ್ 5 ನೇ ತಾರೀಖು ಬೆಳಗ್ಗೆ 6 ಗಂಟೆ ಸಮಯದಿಂದ ಸಂಜೆ 5 ಗಂಟೆಯವರೆಗೆ ಬಂದ್ ನಡೆಯಲಿದೆ. ಇದು ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಕನ್ನಡಿಗರ ನಡುವಿನ ಹೋರಾಟವಾಗಿದೆ. ಯಡಿಯೂರಪ್ಪರವರ ಸಚಿವ ಸಂಪುಟ ಸದಸ್ಯರು, ಶಾಸಕರು ಬಂದ್ ವಿರೋಧಿಸಿ ಮಾತನಾಡಿಲ್ಲ. ಆದರೆ ಸಿಎಂ ಯಡಿಯೂರಪ್ಪ ಯಾವ ರೀತಿ ಬಂದ್ ನಡೆಸುತ್ತಾರೆ ನಾನು ನೋಡುತ್ತೇನೆ ಎಂದು ಹೇಳಿದ್ದಾರೆ. ಅವರಿಗೆ ಅಂದೇ ನಾವು ಉತ್ತರ ನೀಡುತ್ತೇವೆ ಎಂದು ಸವಾಲು ಹಾಕಿದರು.

ನಾವು ಜೈಲಿಗೆ ಹೋದರೂ ಜಾಮೀನು ಪಡೆಯುವುದಿಲ್ಲ.

ಈಗಾಗಲೇ 144 ಸೆಕ್ಷೆನ್ ಜಾರಿಗೆ ತರಲು ಮುಂದಾಗಿದ್ದು, ಇದಕ್ಕೆಲ್ಲ ನಾವು ಹೆದರುವುದಿಲ್ಲ ಎಂದರು.



Dailyhunt
Disclaimer: This content has not been generated, created or edited by Dailyhunt. Publisher: Kannada News Now