Thursday, 29 Jul, 10.11 am Kannada News Now

ಭಾರತ
Do not miss this: ನೀವು ರಾತ್ರಿ ವೇಳೆ ಕೆಲಸ ಮಾಡ್ತಾ ಇದ್ದೀರಾ? ಹಾಗಾದ್ರೇ ಇದನ್ನು ತಪ್ಪದೇ ಓದಿ

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಟೈಪ್‌ 2 ಡಯಾಬಿಟೀಸ್‌ ಹೊಂದಿರುವ ಹಾಗೂ ರಾತ್ರಿ ವೇಳೆ ಕೆಲಸ ಮಾಡಲು ಇಷ್ಟಪಡುವ ವ್ಯಕ್ತಿಗಳಲ್ಲಿ ಹೆಚ್ಚಾಗಿ ಖಿನ್ನತೆ ಸಮಸ್ಯೆ ಕಾಡುತ್ತದೆ. ಅದರಲ್ಲೂ ಬೇಗನೆ ಹಾಗೂ ಸರಿಯಾದ ಟೈಮ್‌ಗೆ ಮಲಗುವವರಿಗಿಂತ ಹೆಚ್ಚಾಗಿ ತಡವಾಗಿ ಮಲಗುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇಷ್ಟು ಮಾತ್ರವಲ್ಲದೆ ಹಲವಾರು ಸಮಸ್ಯೆಗಳು ನೀವು ರಾತ್ರಿ ಪಾಳಿಯ ಕೆಲಸಗಾರರಾಗಿದ್ದರೆ ನಿಮ್ಮನ್ನು ಕಾಡುತ್ತದೆ. ಆಸಿಡಿಟಿ, ಬೊಜ್ಜು, ಮಾನಸಿಕ ಖಿನ್ನತೆ, ನಿದ್ರೆಯ ಸಮಸ್ಯೆ ಕೂಡ ಕಾಡುತ್ತದೆ.

Tokyo Olympics 2020 : 'ಟೋಕಿಯೋ ಒಲಂಪಿಕ್ಸ್'ನಲ್ಲಿ ಭಾರತದ 'ಬಾಕ್ಸರ್ ಸತೀಶ್ ಕುಮಾರ್' ಕ್ವಾಟರ್ ಫೈನಲ್ ಗೆ ಪ್ರವೇಶ

ಹಾಗಾದ್ರೇ ನೈಟ್‌ ಶಿಫ್ಟ್‌ನಲ್ಲಿ ಕೆಲಸ ಮಾಡುವುದರಿಂದ ಉಂಟಾಗುವ ಸಮಸ್ಯೆಗಳೇನು ಗೊತ್ತಾ? ?

ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗೋದಿಲ್ಲ. ಇದರಿಂದ ನೀವು ಮಾನಸಿಕವಾಗಿ ಕುಗ್ಗುತ್ತೀರಿ. ಸಂಶೋಧನೆ ಮೂಲಕ ತಿಳಿದು ಬಂದ ಅಂಶವೇನೆಂದರೆ ನೈಟ್‌ ಶಿಫ್ಟ್‌ನಲ್ಲಿ ಕೆಲಸ ಮಾಡುವವರಿಗೆ ಹೆಚ್ಚಾಗಿ ಡಯಾಬಿಟೀಸ್‌ ಸಮಸ್ಯೆ ಕಾಡುತ್ತದೆ. ಶಿಫ್ಟ್‌ ವರ್ಕ್‌ ಮಾಡುವುದರಿಂದ ಬೊಜ್ಜು ಹೆಚ್ಚುತ್ತದೆ. ಇದರಿಂದ ಮುಂದೆ ಹಲವಾರು ಸಮಸ್ಯೆಗಳು ಆರೋಗ್ಯವನ್ನು ಬಾಧಿಸುತ್ತವೆ. ನೈಟ್‌ ಶಿಫ್ಟ್‌ನಲ್ಲಿ ಕೆಲಸ ಮಾಡುವುದರಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ 30 ಶೇಕಡಾದಷ್ಟು ಹೆಚ್ಚಾಗುತ್ತದೆ ಎಂದು ಇಂಟರ್‌ನ್ಯಾಷನಲ್‌ ಜರ್ನಲ್‌ ಆಫ್‌ ಕ್ಯಾನ್ಸರ್‌ ತಿಳಿಸಿದೆ. ಹೃದಯ ಸ್ಥಂಬನ ಉಂಟಾಗುವ ಸಾಧ್ಯತೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಾಗಿ ಕಾಡುತ್ತದೆ. ಈ ಶಿಫ್ಟ್‌ನಲ್ಲಿ ಕೆಲಸ ಕೆಲಸ ಮಾಡುವುದರಿಂದ ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚಿನ ಗಾಯ ಅಥವಾ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ನೈಟ್‌ ಶಿಫ್ಟ್‌ನಿಂದ ಉಂಟಾಗುವ ಒಂದು ಮುಖ್ಯವಾದ ಸಮಸ್ಯೆ ಎಂದರೆ ಖಿನ್ನತೆ ಹೆಚ್ಚಾಗಿ ಕಾಡುತ್ತದೆ.

ನೀವು ನೈಟ್‌ಶಿಫ್ಟ್‌ನಲ್ಲಿ ಕೆಲಸ ಮಾಡುವುದಾದರೆ ನಿಮ್ಮ ದಿನಚರಿಯನ್ನು ಹೀಗೆ ಬದಲಾಯಿಸಿ. ಹೀಗೆ ಮಾಡಿದರೆ ಮಾತ್ರ ನೀವು ಆರೋಗ್ಯದಿಂದಿರಲು ಸಾಧ್ಯ. ಮನೆಯಲ್ಲಿ ತಯಾರಿಸಿದ ಆಹಾರವನ್ನೇ ತೆಗೆದುಕೊ೦ಡು ಹೋಗಿ. ಹಾಗೆಯೇ ರಾತ್ರಿಯ ಊಟವನ್ನು ಹೆಚ್ಚು ತಡವಾಗಿ ಮಾಡದಿರಿ, ಇದರಿ೦ದ ನಿದ್ದೆ ಬ೦ದ೦ತಾಗಿ ಆಲಸ್ಯದ ಭಾವನೆ ಬರಬಹುದು. ರಾತ್ರಿಯ ತಿನ್ನುವ ಚಟವನ್ನು ನಿರ್ವಹಿಸಲು ಕೆಲವು ಆರೋಗ್ಯಕರ ಸ್ನಾಕ್‌ಗಳನ್ನು ನಿಮ್ಮ ಜೊತೆ ತೆಗೆದುಕೊ೦ಡು ಹೋಗಿ. ಹಣ್ಣುಗಳು ಹಾಗೂ ಆರೋಗ್ಯಕರ ಸ್ನಾಕ್‌ಗಳು, ಅ೦ದರೆ ಡ್ರೈ ಫ್ರುಟ್ ಸೇವಿಸಿದರೆ ಉತ್ತಮ. ಇದು ನಿಮ್ಮ ಎನರ್ಜಿಯ ಮಟ್ಟವನ್ನು ಹೆಚ್ಚಿಸುತ್ತದೆ. ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಿ, ಏಕೆ೦ದರೆ, ನೀವು ತಿನ್ನುವ ಪ್ಯಾಟರ್ನ್ ನಿಮ್ಮ ಜೀವನ ಶೈಲಿಯ ಮೇಲೆ ಪ್ರಭಾವ ಬೀರುತ್ತದೆ.Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top