Wednesday, 16 Sep, 7.17 pm Kannada News Now

ಕರ್ನಾಟಕ
ಡ್ರಗ್ಸ್ ಲಿಂಕ್ ಆರೋಪ : ವಿಚಾರಣೆ ಮುಗಿಸಿ ಸ್ಟಾರ್ ದಂಪತಿ ಮನೆಗೆ ವಾಪಸ್ : ಮನಸಾರೆ ಜೋಡಿಯ ಮೊಬೈಲ್ ಸಿಸಿಬಿ ವಶಕ್ಕೆ

ಬೆಂಗಳೂರು: ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್​ಗೆ ನೋಟಿಸ್​ ಜಾರಿ ಮಾಡಿರುವ ಸಿಬಿಬಿ, ಇಂದು(ಬುಧವಾರ) ಬೆಳಗ್ಗೆ 11 ಗಂಟೆಗೆ ಕಚೇರಿಗೆ ಹಾಜರಾಗುವಂತೆ ತಿಳಿಸಿತ್ತು. ಅದ್ರಂತೆ, ಸ್ಟಾರ್‌ ದಂಪತಿಗಳು ವಿಚಾರಣೆಗೆ ಹಾಜರಾಗಿದ್ದು, ವಿಚಾರಣೆ ಮುಗಿಸಿ ಮನೆಗೆ ತೆರಳಿದ್ದಾರೆ.

ಸಿಸಿಬಿ ವಿಚಾರಣೆ ಎದುರಿಸಿದ ನಟ ದಿಗಂತ್ ಹಾಗೂ ಐಂದ್ರಿತಾ ರೇ ದಂಪತಿ ತಮ್ಮ ಆರ್ ಆರ್ ನಗರ ನಿವಾಸಕ್ಕೆ ವಾಪಸ್ ಆಗಿದ್ದಾರೆ. ನಾಲ್ಕು ಗಂಟೆಗಳ ಕಾಲ ದಂಪತಿಯ ವಿಚಾರಣೆ ನಡೆಸಿದ ಸಿಸಿಬಿ ಮಹತ್ವದ ಮಾಹಿತಿ ಕಲೆ ಹಾಕಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮನಸಾರೆ ಜೋಡಿಯ ಮೊಬೈಲ್ ಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್ ಡಾಟಾ ಸಂಗ್ರಹಿಸಲು ಸಿಸಿಬಿ ಇಬ್ಬರ ಮೊಬೈಲ್ ನ್ನು ವಶಕ್ಕೆ ಪಡೆದಿದೆ. ಸದ್ಯದಲ್ಲೇ ಸಿಸಿಬಿ ಈ ಜೋಡಿಯ ಮತ್ತೊಂದು ಸುತ್ತಿನ ವಿಚಾರಣೆ ನಡೆಸಲಿದೆ.

SBI ಬ್ಯಾಂಕ್‌ ಗ್ರಾಹಕರಿಗೆ ಮಹತ್ವದ ಮಾಹಿತಿ : ಹಣ ಡ್ರಾ ಮಾಡಲು ಇನ್ಮುಂದೆ OTP ಕಡ್ಡಾಯ

\

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top