Thursday, 29 Jul, 12.11 pm Kannada News Now

ಕರ್ನಾಟಕ
ಈಗಲೂ ನಮ್ಮ ನಾಯಕ ಯಡಿಯೂರಪ್ಪನವರೇ - ಶಾಸಕ ಎಂಪಿ ರೇಣುಕಾಚಾರ್ಯ

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದ್ರೂ.. ನಮ್ಮ ನಾಯಕರು ಯಡಿಯೂರಪ್ಪ ಅವರೇ ಎಂಬುದಾಗಿ ಹೊನ್ನಾಳ್ಳಿ ಶಾಸಕ ಎಂಪಿ.ರೇಣುಕಾಚಾರ್ಯ ಹೇಳಿದ್ದಾರೆ.

Karnataka Politics : ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ, ಸಂಪುಟಕ್ಕೆ ಸೇರೋದಿಲ್ಲ - ಜಗದೀಶ್ ಶೆಟ್ಟರ್

ನಗರದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ, ಮಾತನಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ನಮ್ಮ ಜಿಲ್ಲೆ ಒಂದು ಸಚಿವ ಸ್ಥಾನ ಕೇಳಿದ್ದೇವೆ. ಮಧ್ಯಕರ್ನಾಟಕಕ್ಕೆ ಈ ಬಾರಿಯಾದ್ರೂ ಅವಕಾಶ ಕೊಡಿ ಎಂಬುದಾಗಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ಸಿಎಂ ಅವರಲ್ಲಿ ಕೇಳಿಕೊಂಡಿರೋದಾಗಿ ಹೇಳಿದರು.

Kukke Subramanya Temple : ಇಂದಿನಿಂದ 'ಸುಬ್ರಹ್ಮಣ್ಯ ದೇವಸ್ಥಾನ'ದಲ್ಲಿ 'ಸರ್ಪ ಸಂಸ್ಕಾರ' ಸೇವೆ ಆರಂಭ

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ನನಗೆ ಯಾವ ಖಾತೆ ಕೊಟ್ಟರು ನಿಭಾಯಿಸುತ್ತೇನೆ. ಆದ್ರೇ ಕೂಸು ಹುಟ್ಟೋ ಮೊದಲೇ ಕುಲಾವಿ ಹೊಲಸಿದ್ರು ಅಂತ ಆ ಬಗ್ಗೆ ಈಗ ಮಾತನಾಡೋದಿಲ್ಲ. ಇದೇ ಖಾತೆ ಕೊಡಿ ಅಂತ ಕೇಳುವುದು ಇಲ್ಲ ಎಂಬುದಾಗಿ ಹೇಳಿದರು.

ರೈತರಿಗೆ ಭರ್ಜರಿ ಗುಡ್ ನ್ಯೂಸ್ : ರೈತರಿಗಾಗಿಯೇ 'ಕೃಷಿ ಸಚಿವಾಲ'ಯ 'ಅಗ್ರಿಸ್ಟಾಕ್' ಡೇಟಾಬೇಸ್ ರಚನೆ, ಇದರ ಪ್ರಯೋಜನೆ ಎಷ್ಟು ಗೊತ್ತಾ.?

ನಾನು ಯಡಿಯೂರಪ್ಪ ನೆರಳಿನಲ್ಲೇ ಬೆಳೆದವನು. ಎಲ್ಲೋ ಇದ್ದ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದು ಬಿಎಸ್ ಯಡಿಯೂರಪ್ಪ ಅವರೇ.. ನಾನು ಎದೆ ಮುಟ್ಟಿ ಹೇಳಿಕೊಳ್ಳುತ್ತೇನೆ.. ಸಿಎಂ ಆಗಿ ಬಸವರಾಜ ಬೊಮ್ಮೊಯಿ ಇದ್ದರು, ನಮ್ಮ ನಾಯಕ ಯಡಿಯೂರಪ್ಪ ಎಂದು ತಿಳಿಸಿದರು.

ವಾಹನ ಮಾಲೀಕರು, ಸವಾರರಿಗೆ ಬಿಗ್ ರಿಲೀಫ್ : ಸೆ.30ರವರೆಗೆ DL, RC, FC ದಾಖಲೆಗಳ ಸಿಂಧುತ್ವ ವಿಸ್ತರಣೆDailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top