Thursday, 29 Oct, 7.05 am Kannada News Now

ಭಾರತ
`EMI' ಚಕ್ರಬಡ್ಡಿ ಮನ್ನಾ : ಸಾಲಗಾರರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಮಾಹಿತಿ

ನವದೆಹಲಿ : ಇಎಂಐ ಚಕ್ರಬಡ್ಡಿ ಮನ್ನಾ ಕುರಿತಂತೆ ಕೇಂದ್ರ ಸರ್ಕಾರವು ಸಾಲಗಾರರಿಗೆ ಮತ್ತೊಂದು ಮಹತ್ವದ ಮಾಹಿತಿ ನೀಡಿದ್ದು, ಸಾಲದ ಮಾಸಿಕ ಕಂತು ಪಾವತಿ ಮುಂದೂಡಿಕೆ ಅವಧಿಯಲ್ಲಿನ ಚಕ್ರಬಡ್ಡಿ ಮನ್ನಾಕ್ಕೆ 2020 ರ ಫೆ. 29 ಕ್ಕೆ ಸಾಲದ ಬಾಕಿ ಮೊತ್ತವೇ ಮಾನದಂಡ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

2020 ರ ಫೆ. 29 ಕ್ಕೆ ಕೊನೆಗೊಂಡಂತೆ ಸುಸ್ತಿಯಾಗದ 2 ಕೋಟಿ ರೂ.ವರೆಗಿನ ಸಾಲದ ಬಾಕಿಗೆ ಚಕ್ರಬಡ್ಡಿ ವಿಧಿಸಲಾಗುವುದಿಲ್ಲ. ಆದರೆ ಮಾರ್ಚ್ ನಿಂದ ಆಗಸ್ಟ್ ವರೆಗಿನ ಬಡ್ಡಿಯು ಸಾಲದ ಅಸಲಿಗೆ ಸೇರಲಿದ್ದು, ಇಎಂಐ ಪರಿಷ್ಕೃತವಾಗಲಿದೆ. ಇಎಂಐ ಪಾವತಿಸಿದವರಿಗೆ ಚಕ್ರಬಡ್ಡಿ ಮನ್ನಾದ ಪರಿಹಾರ ನವೆಂಬರ್ 5 ರೊಳಗೆ ಸಾಲಗಾರರ ಖಾತೆಗೆ ಜಮಾ ಆಗಲಿದೆ.

ಸುಪ್ರೀಂಕೋರ್ಟ್ ಸೂಚನೆಯಂತೆ ಮಾರಟೋರಿಯಂ ಅವಧಿಯ ಚಕ್ರಬಡ್ಡಿ ಮನ್ನ ಯೋಜನೆ ಕುರಿತ ಅಧಿಸೂಚನೆ ಹೊರಡಿಸಿದ್ದರೂ ಕೆಲವು ಗೊಂದಲಗಳ ಬಗ್ಗೆ ಪ್ರಶ್ನೆಗಳು ಬರುತ್ತಿರುವ ಕಾರಣ ಹಣಕಾಸು ಸಚಿವಾಲಯ ಈ ಸ್ಪಷ್ಟನೆ ನೀಡಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top