Tuesday, 22 Sep, 11.17 am Kannada News Now

ಕರ್ನಾಟಕ
ಎಸಿಬಿ ಅಧಿಕಾರಿಗಳ ಸೋಗಿನಲ್ಲಿ ಸರ್ಕಾರಿ ನೌಕರರನ್ನು ವಂಚಿಸುತ್ತಿದ್ದ ಇಬ್ಬರು ಅರೆಸ್ಟ್

ಬೆಳಗಾವಿ : ತಾವು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳೆಂದು ಸರ್ಕಾರಿ ನೌಕರರಿಗೆ ಹೆದರಿಸಿ, ಹಣಕ್ಕೆ ಬೇಡಿಕೆ ಇಟ್ಟು, ಹಣಪಡೆದು ವಂಚಿಸುತ್ತಿದ್ದಂತ ಇಬ್ಬರು ಆರೋಪಿಗಳನ್ನು ಬೈಲಹೊಂಗಲ ಪೊಲೀಸರು ಬಂಧಿಸಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಆರೋಪ : ಕಿರುತೆರೆ ನಟಿ ಗೀತಾ ಭಟ್ ISD ವಿಚಾರಣೆಗೆ ಹಾಜರು

ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದ ವಿಶಾಲ್ ಪಾಟೀಲ್, ಬೆಂಗಳೂರಿನ ಕೂಡಿಗೆಹಳ್ಳಿಯ ಸಹಕಾರ ನಗರದ ಶ್ರೀನಿವಾಸ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಇಬ್ಬರು ಬೈಲಹೊಂಗಲದ ಕೃಷಿ ಇಲಾಖೆಯ ಅಧಿಕಾರಿ ಬಿಆರ್ ಹುಲಗನ್ನವರಿಗೆ ತಾವು ಎಸಿಬಿ ಅಧಿಕಾರಿಗಳು ಎಂಬುದಾಗಿ ಪೋನ್ ಮಾಡಿ ಹೆದರಿಸಿದ್ದಾರೆ.

ಜಮ್ಮು ಕಾಶ್ಮೀರ ಎನ್​ಕೌಂಟರ್ : ಓರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ

ಎಸಿಬಿ ಅಧಿಕಾರಿಗಳು ಎಂಬುದಾಗಿ ನಂಬಿಸಿ, ಹೆದರಿಸಿದ್ದರಿಂದ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಹಣ ಕೊಡಲು ಒಪ್ಪಿದ ಅಧಿಕಾರಿ, ನೇಸರಗಿ ಬಳಿ ಬರುವಂತೆ ತಿಳಿಸಿದ್ದಾರೆ. ಯಾಕೋ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದಾಗಿ, ನಕಲಿ ಎಸಿಬಿ ಅಧಿಕಾರಿಗಳು ಎಂಬುದಾಗಿ ತಿಳಿದು ಬಂದಿದೆ. ಮೊದಲೇ ಪ್ಲಾನ್ ಮಾಡಿದಂತೆ ನೇಸರಗಿ ಬಳಿ ಹಣ ಪಡೆಯಲು ಬಂದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top