Kannada News Now

1.8M Followers

Factcheck: 'ಪ್ಯಾನ್-ಆಧಾರ್ ಲಿಂಕ್' ಗಡುವು ಮಾ.31, 2024 ವಿಸ್ತರಣೆಯೇ.? ಇಲ್ಲಿದೆ 'ವೈರಲ್ ಪೋಟೋ' ಅಸಲಿಯತ್ತು.!

27 Mar 2023.9:32 PM

ಕೆಎನ್‌ಎನ್ ಡಿಜಿಟಲ್ ಡೆಸ್ಕ್: ಪ್ಯಾನ್ ಗೆ ಆಧಾರ್ ಸಂಖ್ಯೆ ಲಿಂಕ್ ( Pan-Aadhar Link ) ಮಾಡಲು ಇದೇ ಮಾರ್ಚ್ 31, 2023ರ ಶುಕ್ರವಾರ ಕೊನೆಯ ದಿನವಾಗಿದೆ. ಆದ್ರೇ ಸೋಷಿಯಲ್ ಮೀಡಿಯಾದಲ್ಲಿ ( Social Media ) ಪೋಟೋ ಒಂದು ವೈರಲ್ ಆಗಿದ್ದು, ಗಡುವನ್ನು ಮಾರ್ಚ್ 31, 2024ರವರೆಗೆ ವಿಸ್ತರಿಸಲಾಗಿದೆ ಎಂಬುದಾಗಿ ಹೇಳಲಾಗುತ್ತಿದೆ.

ಆ ವೈರಲ್ ಪೋಟೋ ಹಿಂದಿನ ಅಸಲಿಯತ್ತು ಏನು ಎಂಬುದಾಗಿ ಮುಂದೆ ಓದಿ.

ಸೋಷಿಯಲ್ ಮೀಡಿಯಾಯದಲ್ಲಿ ಹಾಕುವಂತ ಪೋಟೋ(Photo), ಸುದ್ದಿಗಳು ಸತ್ಯಾಸತ್ಯತೆಯ ಪರಿಶೀಲನೆ ಇಲ್ಲದೇ ಕ್ಷಣಾರ್ಧದಲ್ಲಿ ವೈರಲ್ ಆಗುತ್ತವೆ. ಈ ಕಾರಣದಿಂದಲೇ ಅನೇಕರು ಹಲವು ಸಂದರ್ಭಗಳಲ್ಲಿ ಮೋಸ ಹೋದ್ರೇ, ಮತ್ತೆ ಕೆಲ ವೇಳೆ ಎಚ್ಚೆತ್ತುಕೊಂಡು ಸತ್ಯವನ್ನು ತಿಳಿದು ತಮ್ಮ ಕಾರ್ಯದಲ್ಲಿ ತೊಡಗುತ್ತಾರೆ. ಈಗ ಇದೇ ಮಾದರಿಯಲ್ಲಿ ಪ್ಯಾನ್-ಆಧಾರ್ ಲಿಂಕ್ ಮಾಡುವಂತ ಗಡುವು ಮಾರ್ಚ್ 31, 2023 ಆಗಿದ್ದರೂ, ಆ ಗಡುವನ್ನು ಮಾರ್ಚ್ 31, 2024ರವರೆಗೆ ವಿಸ್ತರಿಸಲಾಗಿದೆ ಎಂಬುದಾಗಿ ಆದೇಶದೊಂದಿಗೆ ಪೋಟೋ ಶೇರ್ ಮಾಡಲಾಗುತ್ತಿದೆ.

ಆದ್ರೇ ಓದುಗರೇ ವೈರಲ್ ಆಗಿರುವಂತ ಆದೇಶದಲ್ಲಿ ಇರುವುದು ಮತದಾರರ ಗುರುತಿನ ಚೀಟಿಯೊಂದಿಗೆ ( Voter ID ) ಆಧಾರ್ ಸಂಖ್ಯೆಯನ್ನು ( Aadhar Number ) ಲಿಂಕ್ ಮಾಡುವ ಗಡುವನ್ನು ಕೇಂದ್ರ ಸರ್ಕಾರ 2023 ರ ಏಪ್ರಿಲ್ 1 ರಿಂದ 2024 ರ ಮಾರ್ಚ್ 31 ರವರೆಗೆ ವಿಸ್ತರಿಸಿರೋದು ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಂತ ಆದೇಶ ಪ್ರತಿಯಲ್ಲಿ ಕಾನೂನು ಮತ್ತು ನ್ಯಾಯ ಸಚಿವಾಲಯವು ಮಾರ್ಚ್ 21, 2023 ರ ಅಧಿಸೂಚನೆಯಲ್ಲಿ 'ಕೇಂದ್ರ ಸರ್ಕಾರವು ಕಾನೂನು ಮತ್ತು ನ್ಯಾಯ ಸಚಿವಾಲಯದಲ್ಲಿ (ಶಾಸಕಾಂಗ ಇಲಾಖೆ), ಸಂಖ್ಯೆ ಎಸ್‌ಒ.2893 (ಇ), ದಿನಾಂಕ 17 ಜೂನ್ 2022 ರ ಅಧಿಸೂಚನೆಯಲ್ಲಿ ಈ ಕೆಳಗಿನ ತಿದ್ದುಪಡಿಯನ್ನು ಮಾಡುತ್ತದೆ. ಪದಗಳು ಮತ್ತು ಅಂಕಿಅಂಶಗಳಿಗೆ '2023 ರ ಏಪ್ರಿಲ್ 1' ಅನ್ನು '31 ಮಾರ್ಚ್ 2024' ಅನ್ನು ಬದಲಿಯಾಗಿ ಸೇರಿಸಲಾಗುವುದು ಎಂದಿದೆ.

ಈ ಆದೇಶವು ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದಕ್ಕೇ ಹೊರತು, ಪ್ಯಾನ್ ಸಂಖ್ಯೆಗೆ ಆಧಾರ್ ನಂಬರ್ ಲಿಂಕ್ ಮಾಡುವುದಕ್ಕಲ್ಲ. ಆದ್ರೇ ಇದನ್ನೇ ಕೆಲ ಕಿಡಿಗೇಡಿಗಳು ಪ್ಯಾನ್-ಆಧಾರ್ ಸಂಖ್ಯೆ ಲಿಂಕ್ ಮಾಡಲು ಮಾರ್ಚ್ 31, 2024ರವರೆಗೆ ಗಡುವನ್ನು ವಿಸ್ತರಿಸಲಾಗಿದೆ ಎಂಬುದಾಗಿ ಟೈಪಿಸಿ ಶೇರ್ ಮಾಡಿದ್ದಾರೆ. ಇದು ಸತ್ಯದಿಂದ ಕೂಡಿಲ್ಲ. ಫೇಕ್ ಪೋಟೋವಾಗಿದೆ. ಪ್ಯಾನ್-ಆಧಾರ್ ನಂಬರ್ ಲಿಂಕ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31, 2023 ಆಗಿದೆ. ತಪ್ಪದೇ ನೀವು ಮಾಡಿಲ್ಲದೇ ಇದ್ದರೇ ಮಾಡೋದು ಮರೆಯಬೇಡಿ.

ವರದಿ: ವಸಂತ ಬಿ ಈಶ್ವರಗೆರೆ

Pan Aadhaar Link: 'ಪ್ಯಾನ್‌-ಆಧಾರ್‌ ಲಿಂಕ್‌'ಗೆ ಶುಕ್ರವಾರವೇ ಕೊನೆ ದಿನ: ಜಸ್ಟ್ ಹೀಗೆ ಮಾಡಿ, ಕ್ಷಣಾರ್ಧದಲ್ಲೇ ಲಿಂಕ್.!

BIG BREAKING NEWS: ಲೋಕಾಯುಕ್ತ ಪೊಲೀಸರಿಂದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ | MLA Madal Virupakshappa Arrest


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags