Monday, 25 Jan, 8.26 am Kannada News Now

ಕರ್ನಾಟಕ
'FDA' ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ : ಸಿಸಿಬಿಯಿಂದ ಮತ್ತೋರ್ವ ಆರೋಪಿ ಅರೆಸ್ಟ್

ಬೆಂಗಳೂರು : ಕೆಪಿಎಸ್ಸಿ ಎಫ್ ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ಇದೀಗ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಕೆಪಿಎಸ್ ಸಿ SDA ಸಿಬ್ಬಂದಿ ರಮೇಶ್ ಹೆರಗಲ್ ಎಂದು ಗುರುತಿಸಲಾಗಿದೆ. ಎಫ್ ಡಿಎ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದಂತೆ ಈತ ತನ್ನ ಊರಲ್ಲಿ ತಲೆಮರೆಸಿಕೊಂಡಿದ್ದನು ಎಂದು ಹೇಳಲಾಗಿದೆ.

ಬಾಗಲಕೋಟೆ ಜಿಲ್ಲೆಯ ಬೆಳಗಾವಿ ತಾಲೂಕಿನ ಬೂದಿಹಾಳ ಗ್ರಾಮದ ರಮೇಶ್ ಹೆರಗಲ್ ಎಂಬಾತನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಪಿಎಸ್ಸಿಯ ಎಫ್ ಡಿ ಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸಂಬಂಧ ಸಿಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕೆಪಿಎಸ್ಸಿಯಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಶಂಕೆ ವ್ಯಕ್ತ ಪಡಿಸಿರುವಂತ ಪೊಲೀಸರು, ಈಗಾಗಲೇ ಬಂಧಿತ ಚಂದ್ರು, ರಾಚಪ್ಪ ಸೇರಿದಂತೆ 14 ಆರೋಪಿಗಳು ನೀಡಿದಂತ ಮಾಹಿತಿ ಆಧರಿಸಿ, ಮತ್ತಷ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ ಸೇರಿಕೊಳ್ಳಿ
https://bit.ly/363lK75

BIGG NEWS : 'SSLC' ಪಾಸಾದವರಿಗೆ ಬಂಪರ್ ಸುದ್ದಿ : 'RBI' ನಲ್ಲಿ 241 ಹುದ್ದೆಗಳಿಗೆ ಅರ್ಜಿ ಆಹ್ವಾನ

BIGG NEWS : ಕೊರೊನಾ ಬುಲೆಟಿನ್ : ರಾಜ್ಯದಲ್ಲಿ ಇಂದು 573 ಜನರಿಗೆ ಸೋಂಕು ದೃಢ : ನಾಲ್ವರು ಬಲಿ







Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top