Monday, 25 Jan, 9.38 am Kannada News Now

ಕರ್ನಾಟಕ
FDA ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : KPSC ನೌಕರ ಸಿಸಿಬಿ ವಶಕ್ಕೆ.!

ಬೆಂಗಳೂರು : ನಿನ್ನೆ ನಡೆಯಲು ನಿರ್ಧರಿಸಲಾಗಿದ್ದಂತ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡ ಹಿನ್ನಲೆಯಲ್ಲಿ ಪರೀಕ್ಷೆ ಮುಂದೂಡಲಾಗಿತ್ತು. ಈ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈಗಾಗಲೇ 14 ಆರೋಪಿಗಳನ್ನು ಬಂಧಿಸಲಾಗಿದೆ. ಇದರ ಮಧ್ಯೆ ಸಿಸಿಬಿ ಪೊಲೀಸರು ಕೆ ಪಿ ಎಸ್ಸಿಯ ಪ್ರಮುಖ ಆರೋಪಿ ದ್ವಿತೀಯ ದರ್ಜೆ ಸಹಾಯಕ(ಎಸ್ ಡಿ ಎ) ರಮೇಶ್ ಆಲಿಯಾಸ್ ರಾಮಪ್ಪ ಹೆರಕಲ್ ಎಂಬಾತನನ್ನು ಜಮಖಂಡಿಯಲ್ಲಿ ವಶಕ್ಕೆ ಪಡೆದಿದ್ದಾರೆ.

ಮೈಸೂರಿನಲ್ಲಿ ದೇಶದಲ್ಲಿಯೇ ಮೊದಲು ಎನಿಸಿರುವ 'ಶ್ರೀಗಂಧ ಮ್ಯೂಸಿಯಂ' ಇಂದು ಉದ್ಘಾಟನೆ

ಎಫ್ ಡಿ ಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈಗಾಗಲೇ ಪ್ರಕರಣದಲ್ಲಿ ಇನ್ಸ್ ಪೆಕ್ಟರ್ ಚಂದ್ರು, ರಾಚಪ್ಪ ಸೇರಿದಂತೆ 14 ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ನಿನ್ನೆ ಸಿಸಿಬಿ ಪೊಲೀಸರು ಪ್ರಶ್ನೆ ಪತ್ರಿಕೆ ಲೀಕ್ ಮಾಡಿದಂತ ಆಯೋಗದ ಪ್ರಮುಖ ಆರೋಪಿ ರಮೇಶ್ ಆಲಿಯಾಸ್ ರಾಮಪ್ಪ ಹೆರಕಲ್ ಎಂಬಾತನನ್ನು ಜಮಖಂಡಿಯಲ್ಲಿ ವಶಕ್ಕೆ ಪಡೆದಿದ್ದಾರೆ.

ಬ್ರೇಕಿಂಗ್ : ಬ್ರೆಜಿಲ್ : ಲಘು ವಿಮಾನ ಅಪಘಾತ : ನಾಲ್ವರು ಫುಟ್ ಬಾಲ್ ಆಟಗಾರರು ಸಾವು

ಅಂದಹಾಗೇ ಬೀಳಗಿ ತಾಲೂಕಿನ ಬೂದಿಹಾಳ ಎಸ್ ಹೆಚ್ ಗ್ರಾಮದವನಾದ ರಮೇಶ್, ಕೆಪಿಎಸ್ಸಿ ಬೆಂಗಳೂರು ಕಚೇರಿಯ ಗೌಪ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇಂತಹ ಅವರನ್ನು ಶನಿವಾರ ರಾತ್ರಿಯೇ ಬಾಗಲಕೋಟೆ ಜಿಲ್ಲಾ ಪೊಲೀಸರು ಆತನನ್ನು ವಶಕ್ಕೆ ಪಡೆದು, ಆನಂತ್ರ ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ವಶಕ್ಕೆ ಪಡೆದಿರುವಂತ ರಮೇಶ್ ಅವರನ್ನು ಸಿಸಿಬಿ ಪೊಲೀಸರು ಈಗ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ ಸೇರಿಕೊಳ್ಳಿ
https://bit.ly/367sVuW

GOOD NEWS: EPFOನಿಂದ ಶೇ.8.5 ಬಡ್ಡಿ ನೀಡಲು ಶುರು, PF ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿDailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top