Sunday, 24 Jan, 12.14 pm Kannada News Now

ಭಾರತ
ʼಫೆ.1ʼರಿಂದ ದೇಶದಲ್ಲಿ ಎಲ್ಲಾ ʼಪ್ಯಾಸೆಂಜರ್ ರೈಲುʼಗಳು ಓಡಾಡುತ್ವಾ? ಇಲ್ಲಿದೆ ನೋಡಿ ʼವೈರಲ್ ಸುದ್ದಿʼಯ ಅಸಲಿ ಮುಖ..!

ನವದೆಹಲಿ: 2021ರ ಫೆಬ್ರವರಿ 1ರಿಂದ ದೇಶದ ಎಲ್ಲಾ ಸ್ಥಳೀಯ ಮತ್ತು ಪ್ರಯಾಣಿಕ ರೈಲುಗಳನ್ನ ಓಡಿಸಲು ನಿರ್ಧರಿಸಲಾಗಿದೆಯೇ..? ನೀವು ಕೂಡ ಇಂತಹ ಸುದ್ದಿಯನ್ನ ಓದಿದ್ದೀರಾ? ಹಾಗಾದ್ರೆ, ಈ ವೈರಲ್‌ ಸುದ್ದಿಯಲ್ಲಿ ನಿಜಾಂಶವಿದ್ಯಾ? ಭಾರತೀಯ ರೈಲ್ವೆ ನೀಡಿದ ಸ್ಪಷ್ಟೀಕರಣವೇನು? ಇಲ್ಲಿದೆ ನೋಡಿ ಮಾಹಿತಿ.

ರಾಜ್ಯದಲ್ಲಿ ಇನ್ಮುಂದೆ ಅಕ್ರಮ ಗಣಿಗಾರಿಕೆ ನಡೆದ್ರೆ ಅಧಿಕಾರಿಗಳೇ ಹೊಣೆ: ಸಿಎಂ ಯಡಿಯೂರಪ್ಪ

ಈ ವೈರಲ್‌ ಆಗ್ತಿರೋ ಸುದ್ದಿಯಲ್ಲಿ ಸತ್ಯಾಂಶವೆಷ್ಟಿದೆ ಅನ್ನೋದನ್ನ ಪಿಐಬಿ ಫ್ಯಾಕ್ಟ್ ಚೆಕ್ ಮೂಲಕ ಫ್ಯಾಕ್ಟ್ ಚೆಕ್ ಮಾಡಿದೆ. ಇದ್ರಿಂದ ಗೊಇತ್ತಾಗಿರೋದು ಏನು ಅಂದ್ರೆ, ರೈಲ್ವೇ ಇಲಾಖೆ ಈ ರೀತಿಯ ಯಾವುದೇ ಘೋಷಣೆ ಮಾಡಿಲ್ಲ. ಇದೊಂದು ಅಪ್ಪಟ ಸುಳ್ಳು ಸುದ್ದಿ. ಅಸಲಿಗೆ ರೈಲುಗಳು ಸಾಮಾನ್ಯವಾಗಿ ಯಾವಾಗ ಓಡುತ್ತವೆ ಅನ್ನೋದ್ರ ಬಗ್ಗೆಯೂ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಾಗಿಲ್ಲ ಎಂದು ಮಾಜಿ ರೈಲ್ವೆ ಸಿಇಒ ವಿಕೆ ಯಾದವ್ ಡಿಸೆಂಬರ್‌ನಲ್ಲಿ ತಿಳಿಸಿದ್ದರು. ಈ ಕುರಿತು ಸಚಿವಾಲಯ ನಿರ್ಧಾರ ತೆಗೆದುಕೊಳ್ಳುತ್ತೆ. ನಿರ್ಧಾರ ತೆಗೆದುಕೊಂಡಾಗಲೆಲ್ಲಾ ರೈಲ್ವೆ ಈ ಬಗ್ಗೆ ಅಧಿಕೃತ ಮಾಹಿತಿಯನ್ನ ನೀಡಲಿದೆ.

ಖಾತೆ ಹಂಚಿಕೆಯ ವೇಳೆ ಒಕ್ಕಲಿಗರನ್ನ ನಿರ್ಲಕ್ಷ್ಯ ಮಾಡಿಲ್ಲ: ಬಿ. ಸಿ ಪಾಟೀಲ್

ನೀವು ಸಹ ಅಂತಹ ಸಂದೇಶಗಳನ್ನ ಪಡೆದರೆ, ಅವುಗಳ ಸತ್ಯಾಂಶದ ಬಗ್ಗೆ ಅನುಮಾನವಿದ್ರೆ, ಅದನ್ನ https://factcheck.pib.gov.in/ ಅಥವಾ ವಾಟ್ಸಾಪ್ ಸಂಖ್ಯೆ +918799711259 ಫ್ಯಾಕ್ಟ್ ಚೆಕ್‌ʼಗಾಗಿ ಪಿಐಬಿಗೆ ಕಳುಹಿಸಬಹುದು. ಇಮೇಲ್: pibfactcheck g gmail.com ಗೆ ಕಳುಹಿಸಿ. ಈ ಮಾಹಿತಿಯು ಪಿಐಬಿ ವೆಬ್‌ಸೈಟ್ https://pib.gov.in ನಲ್ಲಿಯೂ ಲಭ್ಯವಿದೆ.

ಕೊರೊನಾ ಅವಧಿಯಲ್ಲಿ ಹೆಚ್ಚುತ್ತಿವೆ ನಕಲಿ ಸುದ್ದಿಗಳ ಹವಾಳಿ
ಕರೋನಾ ಯುಗದಲ್ಲಿ, ದೇಶಾದ್ಯಂತ ಚಾಲ್ತಿಯಲ್ಲಿರುವ ಪರಿಸ್ಥಿತಿ, ಅನೇಕ ನಕಲಿ ಸುದ್ದಿಗಳು ಹೆಚ್ಚು ವೈರಲ್ ಆಗುತ್ತಿವೆ. ವೈರಲ್ ಸುದ್ದಿಯನ್ನ ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ ನಿರಾಕರಿಸಿದೆ ಮತ್ತು ಸರ್ಕಾರ ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಕೊರೊನಾ ಅವಧಿಯಲ್ಲಿ ಇಂತಹ ನಕಲಿ ಸುದ್ದಿಗಳು ಹರಡದಂತೆ ತಡೆಯಲು ಸರ್ಕಾರ ಹಲವಾರು ಪ್ರಯತ್ನಗಳನ್ನ ಮಾಡಿದೆ.

ನಾಳೆಯಿಂದ `ಡಿಜಿಟಲ್ ಐಡಿ ಕಾರ್ಡ್' ವಿತರಣೆಗೆ ಚಾಲನೆ : ಡೌನ್ ಲೋಡ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top