Dailyhunt Logo
  • Light mode
    Follow system
    Dark mode
    • Play Story
    • App Story
ಗಾಲ್ವಾನ್ ಕಣಿವೆಯಲ್ಲಿ ಅತಿಕ್ರಮಣ ಚೀನಾದ ಪೂರ್ವ ನಿಯೋಜಿತ ಕೃತ್ಯ : ಅಮೆರಿಕಾ

ಗಾಲ್ವಾನ್ ಕಣಿವೆಯಲ್ಲಿ ಅತಿಕ್ರಮಣ ಚೀನಾದ ಪೂರ್ವ ನಿಯೋಜಿತ ಕೃತ್ಯ : ಅಮೆರಿಕಾ

Kannada News Now 5 years ago

ವಾಷಿಂಗ್ಟನ್‌: ಕಳೆದ ಜೂನ್‌ನಲ್ಲಿ ಪೂರ್ವ ಲಡಾಕ್‌ನ ಗಡಿ ರೇಖೆ ಬಳಿಯ ಗಲ್ವಾನ್‌ ಕಣಿವೆಯಲ್ಲಿ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಸೈನಿಕರು ಸೃಷ್ಟಿಸಿದ ಗಡಿ ಘರ್ಷಣೆ ಪೂರ್ವ ನಿಯೋಜಿತ ಕೃತ್ಯ ಎಂದು ಅಮೆರಿಕದ ಸಮಿತಿಯೊಂದು ಹೇಳಿದೆ.

ತನ್ನ ನೆರೆ ರಾಷ್ಟ್ರಗಳ ವಿರುದ್ಧ ವರ್ಷವಿಡೀ ನಡೆಸಬೇಕಿರುವ ಘರ್ಷಣಾ ಕಾರ್ಯತಂತ್ರ, ಪ್ರಚೋದನಕಾರಿ ಅತಿಕ್ರಮಣ ಸಂಚಿನ ಬಗ್ಗೆ ಚೀನಾ ಸೇನೆ ವರ್ಷದ ಆರಂಭದಲ್ಲಿಯೇ ನೀಲನಕ್ಷೆ ಸಿದ್ಧಪಡಿಸಿತ್ತು ಎಂದು ಅಮೆರಿಕಾ ತಿಳಿಸಿದೆ.

ಅದರಂತೆ ಜಪಾನ್‌ನಿಂದ ಭಾರತದವರೆಗೆ ಎಲ್ಲ ರಾಷ್ಟ್ರಗಳೊಂದಿಗೆ ಘರ್ಷಣೆಗೆ ಇಳಿಯುವುದಕ್ಕೆ ಚೀನಾ ಸಿದ್ಧತೆ ಮಾಡಿಕೊಂಡಿತ್ತು. ಚೀನಾ ರಕ್ಷಣಾ ಸಚಿವರು ಗಡಿಯಲ್ಲಿ ಪಾರುಪತ್ಯ ಸ್ಥಾಪಿಸುವಂತೆ ಪಿಎಲ್‌ಎಗೆ ಸುಳಿವು ನೀಡಿದ ಕೂಡಲೇ ಎಲ್‌ಎಸಿಯಲ್ಲಿ ಘರ್ಷಣೆ ನಡೆಸಿ 20 ಭಾರತೀಯ ಯೋಧರನ್ನು ಹತ್ಯೆಗೈಯಲಾಯಿತು ಎಂದು ಅಮೆರಿಕ-ಚೀನಾ ಆರ್ಥಿಕ ಹಾಗೂ ಸುರಕ್ಷತಾ ಪರಿಶೀಲನಾ ಸಮಿತಿಯ(ಯುಎಸ್‌ಸಿಸಿ) ವರದಿ ಹೇಳಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now