Dailyhunt
ಗಮನಿಸಿ : ಅ.1ರಿಂದ 15ರವರೆಗೆ 'ಮೈಸೂರು ಅರಮನೆ'ಗೆ 'ಸಾರ್ವಜನಿಕರ ಪ್ರವೇಶ' ನಿಷೇಧ

ಗಮನಿಸಿ : ಅ.1ರಿಂದ 15ರವರೆಗೆ 'ಮೈಸೂರು ಅರಮನೆ'ಗೆ 'ಸಾರ್ವಜನಿಕರ ಪ್ರವೇಶ' ನಿಷೇಧ

Kannada News Now 4 years ago

ಮೈಸೂರು : ನಗರದಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡ ಐತಿಹಾಸಿಕ ದಸರಾ ಮಹೋತ್ಸವವನ್ನು ನಡೆಸಲಾಗುತ್ತಿದೆ. ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ, ಈ ಬಾರಿ ಅರಮನೆಗೆ ಮಾತ್ರವೇ ದಸರಾ ಹಬ್ಬದ ಆಚರಣೆಯನ್ನು ಸೀಮಿತಗೊಳಿಸಲಾಗಿದೆ. ಹೀಗಾಗಿ ಅಕ್ಟೋಬರ್ 1ರಿಂದ 15ರವರೆಗೆ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

Covid19 Vaccine : ಕೋವಿಡ್-19 ಲಸಿಕೆ ಪಡೆದ ಗರ್ಭಿಣಿಯರು ನವಜಾತ ಶಿಶುಗಳಿಗೆ ರಕ್ಷಣೆಯನ್ನು ರವಾನಿಸ್ತಾರೆ - ಅಧ್ಯಯನ

ವಿಶ್ವವಿಖ್ಯಾತ ಮೈಸೂರು ದಸರಾ-2021ರ ಆಚರಣೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಅಕ್ಟೋಬರ್ 1ರಿಂದ ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ಆರಂಭಗೊಳ್ಳಲಿದೆ. ಅಕ್ಟೋಬರ್ 7ರಿಂದ ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಮೈಸೂರು ಅರಮನೆಯ ಪ್ರವೇಶವನ್ನು ನಿಷೇಧಗೊಳಿಸಲಾಗಿದೆ.

ಸೆ.27ರಂದು 'ಭಾರತ್ ಬಂದ್' ಹಿನ್ನಲೆ : ಬಸ್ ಗಳ ಮೇಲಿನ ದಾಳಿ ತಪ್ಪಿಸಲು KSRTCಯಿಂದ ಮುಂಜಾಗ್ರತಾ ಕ್ರಮ

ಇನ್ನೂ ಅಕ್ಟೋಬರ್ 7ರಿಂದ 14ರವರೆಗೂ ಮೈಸೂರು ದಸರಾ ಅರಮನೆಯಲ್ಲಿ ನಡೆಯಲಿದೆ. ಈ ಎಲ್ಲಾ ಕಾರಣದಿಂದಾಗಿ ಅಕ್ಟೋಬರ್ 7 ರಿಂದ 15ರವರೆಗೆ ಮಧ್ಯಾಹ್ನ 2.30ರವರೆಗೆ ಅರಮನೆಗೆ ಸಾರ್ವಜನಿಕರ ಪ್ರವೇಷಕ್ಕೆ ನಿರ್ಬಂಧ ಹೇರಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now