ಭಾರತ
ಗಣರಾಜ್ಯೋತ್ಸವ ದಿನ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ರೈತರ ಸಕಲ ಸಿದ್ಧತೆ

ನವದೆಹಲಿ: ಗಣರಾಜ್ಯೋತ್ಸವ ದಿನ ದೆಹಲಿ ಗಡಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ರೈತರು ಸಕಲ ರೀತಿಯಲ್ಲೂ ಸಜ್ಜಾಗಿದ್ದು, ರ್ಯಾಲಿಯಲ್ಲಿ ಪಾಲ್ಗೊಳ್ಳುವ ರೈತರಿಗೆ ರೈತ ಮುಖಂಡರು ಹಲವು ಸೂಚನೆಗಳನ್ನು ನೀಡಿದ್ದಾರೆ.
ರ್ಯಾಲಿ ವೇಳೆ ಯಾರೂ ಯಾವುದೇ ಆಯುಧವನ್ನು ಒಯ್ಯಬಾರದು ಅಥವಾ ಮದ್ಯಪಾನ ಮಾಡಬಾರದು. ಪ್ರಚೋದಿಸುವ ಸಂದೇಶಗಳನ್ನು ಹೊತ್ತ ಬ್ಯಾನರ್‌ಗಳನ್ನು ಅನುಮತಿಸಲಾಗುವುದಿಲ್ಲ ಎಂದು ಕರೆ ನೀಡಿದೆ.
ರ್ಯಾಲಿಯಲ್ಲಿ ಪಾಲ್ಗೊಳ್ಳುವ ಟ್ರಾಕ್ಟರ್ ಗಳು ಸಿಂಗು ಗಡಿಯಿಂದ ಪ್ರಾರಂಭವಾಗಿ ಸಂಜಯ್ ಗಾಂಧಿ ಸಾರಿಗೆ ನಗರ, ಬವಾನ, ಕುತಬ್‌ಗಢ, ಔಚಾಂಡಿ ಗಡಿ ಮತ್ತು ಖಾರ್ಖೋಡಾ ಟೋಲ್ ಪ್ಲಾಜಾದಲ್ಲಿ ಸಂಚರಿಸುತ್ತದೆ. ಸಂಪೂರ್ಣ ಮಾರ್ಗವು 63 ಕಿಲೋಮೀಟರ್ ಉದ್ದವಿರುತ್ತದೆ. ಟಿಕ್ರಿ ಗಡಿಯಿಂದ ಪ್ರಾರಂಭವಾಗುವ 62 ಕಿ.ಮೀ ಉದ್ದದ ಎರಡನೇ ಮಾರ್ಗವು ನಾಗ್ಲೋಯ್, ನಜಾಫ್‌ಗಢ, ಝೊರೋಡಾ ಗಡಿ ಮತ್ತು ರೋಹ್ಟಕ್ ಬೈಪಾಸ್ ಮತ್ತು ಅಸೋಡಾ ಟೋಲ್ ಪ್ಲಾಜಾ ಮೂಲಕ ಹಾದುಹೋಗಲಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/367sVuW