ಕರ್ನಾಟಕ
Ganesh Chathurthi :ಬೆಂಗಳೂರಿನಿಂದ ತೆರಳುವ ಪ್ರಯಾಣಿಕರ ಅನುಕೂಲಕ್ಕೆ '1 ಸಾವಿರ ಹೆಚ್ಚುವರಿ ಬಸ್' ಸೌಲಭ್ಯ ಒದಗಿಸಿದ KSRTC
ಬೆಂಗಳೂರು: ನಾಳೆ ನಾಡಿದ್ದು ಗೌರಿ ಹಾಗೂ ಗಣೇಶ ಹಬ್ಬ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಕಲ್ಪಿಸಿದೆ. ಬೆಂಗಳೂರಿನಿಂದ ಬೇರೆಡೆ ತೆರಳುವವರಿಗೆ ಅನುಕೂಲವಾಗಲೆಂದು ಕೆಎಸ್‌ಆರ್ ಟಿಸಿ ಸುಮಾರು ಒಂದು ಸಾವಿರ ಹೆಚ್ಚುವರಿ ಬಸ್ ಗಳನ್ನು ಕಲ್ಪಿಸಿದೆ.
ಗಣೇಶ ಚತುರ್ಥಿ : ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ನಿಮಗೆ 'ಈ ರೂಲ್ಸ್ ' ಗೊತ್ತಿರಲಿ…
ಪ್ರಯಾಣಿಕರು ತಮ್ಮ ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು. ಅದಕ್ಕಾಗಿ ಇ-ಟಿಕೆಟ್ ಗಳನ್ನು https://ksrtc.karnataka.gov.in/ ವೆಬ್ ಸೈಟಿಗೆ ಭೇಟಿ ನೀಡಿ ಬುಕ್ ಮಾಡಿಕೊಳ್ಳಬಹುದಾಗಿದೆ. ಹತ್ತಿರದ ಬುಕಿಂಗ್ ಕೌಂಟರ್ ಗಳ ಮೂಲಕವೂ ಟಿಕೆಟ್ಗಳನ್ನು ಕಾಯ್ದಿರಿಸಬಹುದು. ಇನ್ನು ವಿಶೇಷ ಬಸ್ ಗಳು ಬೆಂಗಳೂರಿನ ಕೆಂಪೇಗೌಡ ನಿಲ್ದಾಣದಿಂದ ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ ,ಧರ್ಮಸ್ಥಳ, ಕುಂದಾಪುರ ,ಮಂಗಳೂರು, ಶೃಂಗೇರಿ ,ಹೊರನಾಡು, ದಾವಣಗೆರೆ ,ಕಲ್ಬುರ್ಗಿ, ರಾಯಚೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ ಕೊಪ್ಪಳ, ತಿರುಪತಿ, ಬೀದರ್ ಮತ್ತು ಇನ್ನಿತರ ಸ್ಥಳಗಳಿಗೆ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.
ನಿಗಮದ ಅಡಿಯಲ್ಲಿರುವ ಎಲ್ಲಾ ಸ್ಥಳಗಳಿಗೂ ವ್ಯವಸ್ಥೆ ಮಾಡಲಾಗುವುದು ಎಂದು ಕೆ ಎಸ್ ಆರ್ ಟಿ ಸಿ ತಿಳಿಸಿದೆ.
LIC Jeevan Anand Policy : ಈ ಯೋಜನೆಯಲ್ಲಿ ಪ್ರತಿದಿನ ಕೇವಲ 76 ರೂ.ಹೂಡಿಕೆ ಮಾಡಿದ್ರೆ 10.33 ಲಕ್ಷ ರೂ. ಸಿಗಲಿದೆ!
ಪ್ರಯಾಣಿಕರಿಗೆ ಅನುಕೂಲವಾಗಲೆಂದು ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಹುಣಸೂರು, ಮೈಸೂರು ,ಪಿರಿಯಪಟ್ಟಣ, ಕುಶಾಲನಗರ ,ಮಡಿಕೇರಿ, ವಿರಾಜಪೇಟೆ ಈ ಎಲ್ಲಾ ಮಾರ್ಗಗಳಲ್ಲಿ ಬಸ್ ಗಳ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಶಾಂತಿನಗರ ಬೆಂಗಳೂರು ಮಹಾ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶ, ತೆಲಂಗಾಣ ಮಾರ್ಗದ ಕಡೆಗೆ ಚಲಿಸುವ ಬಸ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಯಾಣದ ವೇಳೆ ಪ್ರಯಾಣಿಕರು ಕೋವಿಡ್ 19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೆ ಎಸ್ ಆರ್ ಟಿ ಸಿ ತಿಳಿಸಿದೆ.
'ನಮ್ಮನ್ನು ತಾಲಿಬಾನ್ ಉಗ್ರರೆಂದು ಕರೆಯಬೇಡಿ' : ಪಾಕ್ ಮಾಧ್ಯಮಗಳಿಗೆ 'ಖಡಕ್ ವಾರ್ನಿಂಗ್'