Monday, 25 Jan, 8.13 am Kannada News Now

ಸಿನಿಮಾ
ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವರುಣ್ ಧವನ್

ಮುಂಬೈ: ಬಾಲ್ಯದ ಗೆಳತಿ ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಜೊತೆ ಬಾಲಿವುಡ್ ನಟ ವರುಣ್ ಧವನ್ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಾಲಿವುಡ್ ನ ಖ್ಯಾತನಾಮರು ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

ಭಾನುವಾರ ಅಲಿಬಾಗ್‌ನ ಐಷಾರಾಮಿ 'ದಿ ಮಾನ್ಶನ್‌' ಹೋಟೆಲ್‌ನಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಹಿಂದೂ ಸಂಪ್ರದಾಯದಂತೆ ವರುಣ್, ನತಾಶಾ ದಲಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೇರಳದಲ್ಲಿ ಇಳಿಕೆ ಕಾಣದ ಕೊರೋನಾ ಪ್ರಕರಣ : ನಿನ್ನೆ ಒಂದೇ ದಿನ 6,036 ಪ್ರಕರಣ ದಾಖಲು

ಕೊರೋನಾ ಸಾಂಕ್ರಾಮಿಕದಿಂದಾಗಿ 40-50 ಆಮಂತ್ರಿತ ಗಣ್ಯರ ನಡುವೆ ಮದುವೆ ನಡೆದಿದೆ. ಫೆಬ್ರವರಿಯಲ್ಲಿ ಬಾಲಿವುಡ್ ಗಣ್ಯರಿಗಾಗಿ ವರುಣ್ ಅವರು ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ವರುಣ್ ಮತ್ತು ನತಾಶಾ ದಲಾಲ್ ಜೋಡಿ ಶಾಲೆಯಲ್ಲಿದ್ದಾಗಲೇ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ವರುಣ್ ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ಪ್ರೀತಿ ವಿಚಾರವನ್ನು ಈ ಜೋಡಿ ಮುಚ್ಚಿಟ್ಟಿತ್ತು.ನಂತರ ಜೊತೆಯಾಗಿ ಎಲ್ಲೆಡೆ ಕಾಣಿಸಿಕೊಂಡಿದ್ದರು.

ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ ಸೇರಿಕೊಳ್ಳಿ
https://bit.ly/367sVuW



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top