Kannada News Now

1.8M Followers

Good News : ಬ್ಯಾಂಕ್ ಗ್ರಾಹಕರಿಗೆ ಬಿಗ್ ರಿಲೀಫ್ ; ಈಗ ಖಾತೆಯಲ್ಲಿ 'ಕನಿಷ್ಠ ಬ್ಯಾಲೆನ್ಸ್' ಇಲ್ಲದಿದ್ರೂ ನೋ ಪ್ರಾಬ್ಲಂ, ದಂಡ ವಿಧಿಸೋದಿಲ್ಲ

27 Dec 2022.07:02 AM

ವದೆಹಲಿ : ಗ್ರಾಹಕರಿಗೆ ತಮ್ಮ ಬ್ಯಾಂಕು ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಪಾಡಿಕೊಳ್ಳೋದು ಕಡ್ಡಾಯವಾಗಿದ್ದು, ನಿರ್ದಯವಾಗಿ ದಂಡ ವಿಧಿಸಲಾಗುತ್ತೆ. ಆದ್ರೆ, ಸಧ್ಯ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಇನ್ಮುಂದೆ ಈ ಪರಿಸ್ಥಿತಿ ಇಲ್ಲದಿರಬಹುದು ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಗವಂತ್ ಕಿಶನ್ ರಾವ್ ಕರಾಡ್ ಹೇಳಿದ್ದಾರೆ.

ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದಕ್ಕಾಗಿ ನೀವು ಆಗಾಗ್ಗೆ ದಂಡವನ್ನ ಪಾವತಿಸುತ್ತೀರಾ? ಇನ್ಮುಂದೆ ಹಾಗಾಗುವುದಿಲ್ಲ. ಕನಿಷ್ಠ ಬ್ಯಾಲೆನ್ಸ್ ಕಾಪಾಡಿಕೊಳ್ಳುವ ಪರಿಸ್ಥಿತಿಯನ್ನ ನೀವು ಶೀಘ್ರದಲ್ಲೇ ತೊಡೆದುಹಾಕಬಹುದು. ಬ್ಯಾಂಕುಗಳಲ್ಲಿನ ಕನಿಷ್ಠ ಬ್ಯಾಲೆನ್ಸ್ ಬ್ಯಾಂಕ್ ಅವಲಂಬನೆ ಬದಲಾಗುತ್ತದೆ. ಅದ್ರಂತೆ, ಈ ಹಿಂದೆ ಕೇಂದ್ರ ಸರ್ಕಾರ ತೆರೆದ ಜನ್ ಧನ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಗವಂತ್ ಕರಾಡ್ ಇತ್ತೀಚೆಗೆ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದರು. ಬ್ಯಾಂಕುಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದ ಖಾತೆಗಳ ಮೇಲಿನ ದಂಡವನ್ನ ತೆಗೆದುಹಾಕುವ ನಿರ್ಧಾರವನ್ನು ಬ್ಯಾಂಕುಗಳ ನಿರ್ದೇಶಕರ ಮಂಡಳಿಯು ಶೀಘ್ರದಲ್ಲೇ ತೆಗೆದುಕೊಳ್ಳಬಹುದು ಎಂದು ಸಚಿವರು ಹೇಳಿದರು. ಬ್ಯಾಂಕುಗಳು ಸಂಪೂರ್ಣವಾಗಿ ಸ್ವಾಯತ್ತ ಘಟಕಗಳಾಗಿವೆ ಎಂದು ಅವ್ರು ಹೇಳಿದರು. ಆದ್ದರಿಂದ, ಶೀಘ್ರದಲ್ಲೇ ಬ್ಯಾಂಕುಗಳ ನಿರ್ದೇಶಕರ ಮಂಡಳಿಯು, ಕನಿಷ್ಠ ಬ್ಯಾಲೆನ್ಸ್ ಹೊಂದಿರದ ಖಾತೆಗಳ ಮೇಲಿನ ದಂಡವನ್ನ ತೆಗೆದುಹಾಕಲು ನಿರ್ಧರಿಸಬಹುದು.

ರೈತರೇ ಗಮನಿಸಿ ; ಸರ್ಕಾರದಿಂದ ಖಡಕ್ ಸೂಚನೆ, ಡಿ.31ಕ್ಕೂ ಮೊದ್ಲು ನೀವು ಈ 2 ಕೆಲಸ ಮಾಡ್ಲೇಬೇಕು

Hair Care Tips: ಮೃದುವಾದ, ಹೊಳೆಯುವ ಕೂದಲಿಗೆ ಈ 5 ವಸ್ತುಗಳು ಪರಿಣಾಮಕಾರಿ, ಒಮ್ಮೆ ಟ್ರೈ ಮಾಡಿ

HEALTH TIPS : ಮೊಸರಿಗೆ ಉಪ್ಪು ಬೆರಸಿ ತಿನ್ನುತ್ತಿದ್ದೀರಾ ? ಎಚ್ಚರ.ಈ ಸಮಸ್ಯೆಗಳು ಕಾಡಬಹುದು| Salt in curd


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags