Monday, 19 Apr, 10.32 am Kannada News Now

ಕರ್ನಾಟಕ
GOOD NEWS: ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತದ ಖರೀದಿ ಜೂನ್ 30ರವರೆಗೆ ಅವಧಿ ವಿಸ್ತರಣೆ

ಬೆಂಗಳೂರು : ಹಿಂಗಾರು ಹಂಗಾಮಿನ ಭತ್ತದಕೊಯ್ಲು ಪ್ರಾರಂಭವಾಗಿದ್ದು, ಕೊಯ್ಲುಕಾರ್ಯ ಪ್ರಗತಿಯಲ್ಲಿದೆ. ರಾಶಿ ಸಂದರ್ಭದಲ್ಲಿಬೆಲೆ ಕಡಿಮೆಯಾಗಿಕೋವಿಡ್ ಸಂಕಷ್ಟದಲ್ಲಿ ರಾಜ್ಯದ ರೈತರು ಭತ್ತವನ್ನು ಒತ್ತಡಾತ್ಮಕವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡದಂತೆ ಮಾಡಲುಕೇಂದ್ರ ಸರ್ಕಾರವು ಬೆಂಬಲ ಬೆಲೆಯಲ್ಲಿ ಹಿಂಗಾರು ಹಂಗಾಮಿನ ಭತ್ತವನ್ನು ಖರೀದಿಸುವ ಕಾಲಾವಧಿಯನ್ನು 2021ರ ಜೂನ್‍ವರೆಗೆ ಅವಕಾಶ ಮಾಡಿದ್ದು, ರೈತರ ನೊಂದಣಿಅವಧಿಯನ್ನು ದಿನಾಂಕ:05.05.2021ರವರೆಗೆ ನಿಗಧಿಪಡಿಸಿದೆ.

ಪ್ರತಿರೈತರಿಂದ ಭತ್ತವನ್ನು ಬೆಂಬಲ ಬೆಲೆ ಯೋಜನೆಯಡಿ ಪ್ರತಿಎಕರೆಗೆ 25 ಕ್ವಿಂಟಾಲ್‍ನಂತೆಗರಿಷ್ಠ ಮಿತಿಯನ್ನು ಖರೀದಿಸಲು ರಾಜ್ಯ ಸರ್ಕಾರವು ದಿನಾಂಕ:12.04.2021ರ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಮಾರಾಟ ಮಹಾಮಂಡಳ ಹಾಗೂ ಆಹಾರ ನಿಗಮಗಳನ್ನು ಖರೀದಿ ಸಂಸ್ಥೆಗಳಾಗಿದ್ದು, ಗ್ರೇಡ್- ಎ ಭತ್ತಕ್ಕೆ ಪ್ರತಿಕ್ವಿಂಟಾಲ್ ಗೆ ರೂ.1888 ಹಾಗೂ ಸಾಮಾನ್ಯ ಭತ್ತಕ್ಕೆ ಪ್ರತಿಕ್ವಿಂಟಾಲ್‍ಗೆ ರೂ.1868 ನಿಗದಿಪಡಿಸಲಾಗಿದೆ. ರಾಗಿ ಹಾಗೂ ಜೋಳವನ್ನು ಈಗಾಗಲೇ ನೋಂದಾಯಿತರೈತರಿಂದಬೆಂಬಲ ಬೆಲೆಯಲ್ಲಿಯೋಜನೆಯಲ್ಲಿಖರೀದಿಸಲು 2021ರ ಏಪ್ರಿಲ್ 30ರವರೆಗೆ ಕಾಲಾವಧಿಯನ್ನುವಿಸ್ತರಿಸಲಾಗಿದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರೈತ ಭಾಂಧವರುಕೋವಿಡ್ ನಿಯಮಾವಳಿ ಹಾಗೂ ಬೆಂಬಲ ಬೆಲೆ ಯೋಜನೆ ನಿಯಮಪಾಲಿಸಿ ಇದರ ಪ್ರಯೋಜನ ಪಡಯುವಂತೆ ಕೃಷಿ ಬೆಲೆ ಆಯೋಗದಅಧ್ಯಕ್ಷರಾದ ಹನುಮನಗೌಡ ಬೆಳಗುರ್ಕಿರವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿ ಕೊಂಡಿರುತ್ತಾರೆ.Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top