Kannada News Now
1.8M Followers ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ( PM Kisan Samman Nidhi ) 11ನೇ ಕಂತಿನ ಹಣ ರೈತರ ಬ್ಯಾಂಕ್ ಖಾತೆಗೆ ಯಾವಾಗ ಬಿಡುಗಡೆ ಆಗಲಿದೆ ಎನ್ನುವಂತ ನಿರೀಕ್ಷೆಯಲ್ಲಿದ್ದರು. ಇದೀಗ ಪಿಎಂ ಕಿಸಾನ್ ನಿಧಿಯ ಫಲಾನುಭವಿಗಳ ಖಾತೆಗೆ 11ನೇ ಕಂತಿನ ಹಣವು ಜಮೆಯಾಗಿದೆ.
ಈ ಕುರಿತಂತೆ ಪ್ರಧಾನ ಮಂತ್ರಿ ( Prime Minister Narendra Modi ) ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೂ.26,000 ಕೋಟಿ ಹಣವನ್ನು ಫಲಾನುಭವಿ ರೈತರ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂಬುದಾಗಿ ತಿಳಿಸಿದೆ.
Prime Minister Narendra Modi will also release the 11th installment of the Kisan Samman Nidhi amounting to more than Rs 21,000 crore: PMO
— ANI (@ANI) May 28, 2022
ರೈತರು ನಿಮ್ಮ ಖಾತೆಗೆ ಹಣ ಬಂದಿದ್ಯಾ ಅಂತ ಚೆಕ್ ಮಾಡಲು ಈ ಕ್ರಮ ಅನುಸರಿಸಿ
ಅನರ್ಹ ಫಲಾನುಭವಿಗಳಿಂದ ಹಣವನ್ನು ಹಿಂಪಡೆಯುವುದು: KYC ನಂತರ, ಅನರ್ಹ ಫಲಾನುಭವಿಗಳು ಯೋಜನೆಯಡಿಯಲ್ಲಿ ಪಡೆದ ಹಣವನ್ನು ಹಿಂದಿರುಗಿಸಲು ಕೇಳಲಾಗುತ್ತದೆ. ಪಿಎಂ ಕಿಸಾನ್ ಪೋರ್ಟಲ್, https://pmkisan.gov.in/ ಮೂಲಕ ಹಣವನ್ನು ಆನ್‌ಲೈನ್‌ನಲ್ಲಿ ಮರುಪಾವತಿ ಮಾಡಬಹುದು
ಭೂ ಹಿಡುವಳಿ ಮಿತಿ: ಮೊದಲು 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತ ಕುಟುಂಬಗಳು ಮಾತ್ರ ಕಂತು ಪಡೆಯಲು ಅರ್ಹರಾಗಿದ್ದರು.ಈಗ, ಈ ಮಿತಿಯನ್ನು ಮಾಡಲಾಗಿದೆ. ಎಲ್ಲಾ ರೈತ ಕುಟುಂಬಗಳು ಈಗ ಅರ್ಹವಾಗಿವೆ. ಇದು ವಿಳಂಬಕ್ಕೆ ಕಾರಣವಾಗಿರಬಹುದು.
ಕಾಗದ ಪತ್ರ ತೆರವು: ರೈತರ ಸಂಕಷ್ಟ ನೀಗಿಸಲು ಲೆಕ್ಕಾಧಿಕಾರಿಗಳು, ಕನುಂಗೋರು, ಕೃಷಿ ಅಧಿಕಾರಿಗಳಿಂದ ಪರಿಶೀಲನೆ ನಡೆಸುವ ಅನಿವಾರ್ಯತೆಯನ್ನು ಸರಕಾರ ದೂರ ಮಾಡಿದೆ. ಈಗ, ರೈತರು ತಮ್ಮ ಆಧಾರ್ ಕಾರ್ಡ್ ಬಳಸಿ ತಮ್ಮ ಮನೆಯಲ್ಲಿ ಕುಳಿತು ಯೋಜನೆಗೆ ನೋಂದಾಯಿಸಿಕೊಳ್ಳಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್‌ನಲ್ಲಿ (ಕೆಸಿಸಿ) ಬದಲಾವಣೆಗಳು: ಈಗ, ಕೆಸಿಸಿಯನ್ನು ಪಿಎಂ ಕಿಸಾನ್ ಯೋಜನೆಯೊಂದಿಗೆ ಲಿಂಕ್ ಮಾಡಲಾಗಿದೆ. ಕಾರ್ಡ್ ಬಳಸಿ, ರೈತರು ವಾರ್ಷಿಕ ಶೇ 4 ಬಡ್ಡಿ ದರದಲ್ಲಿ 3 ಲಕ್ಷ ರೂವರೆಗೆ ಲೋನ್ ಪಡೆಯಬಹುದು. ಯೋಜನೆಯಡಿ ಪಡೆದ ಹಣವನ್ನು ಖರ್ಚು ಮಾಡಲು ರೈತರು ಈಗ ಕಾರ್ಡ್ ಅನ್ನು ಬಳಸಬಹುದು.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now