Kannada News Now
1.8M Followers ಬೆಂಗಳೂರು : ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ (Government employees) ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ವೆಚ್ಚದ ಮಿತಿ ಇಲ್ಲದೆ 1527 ವೈದ್ಯಕೀಯ ಚಿಕಿತ್ಸೆ/ಶಸ್ತ್ರ ಚಿಕಿತ್ಸೆಗಳ ನಗದು ರಹಿತ ಸೌಲಭ್ಯ ನೀಡುವ ಆರೋಗ್ಯ ಸಿರಿ (Arogya Siri)ಯೋಜನೆ ಶೀಘ್ರವೇ ಜಾರಿಗೆ ಬರಲಿದೆ.
ರಾಜ್ಯ ಸರ್ಕಾರವು ಆರೋಗ್ಯ ಸಿರಿ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಮೂಲಕ ನೌಕರರು ಮತ್ತು ಅವಲಂಬಿತ ಕುಟುಂಬಸ್ಥರು ಸೇರಿ ರಾಜ್ಯದ 28 ಲಕ್ಷ ಜನರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ 5.40 ಲಕ್ಷ ಸರ್ಕಾರಿ ನೌಕರರಿದ್ದಾರೆ. ಆರೋಗ್ಯ ಸಿರಿ ಯೋಜನೆಗಾಗಿ ಪ್ರತಿ ನೌಕರನ ಮೂಲ ವೇತನದ ಶೇ. 1 ರಷ್ಟು ಹಣ ಕಡಿತಗೊಳಿಸಲಾಗುತ್ತದೆ. ಕಡಿತಗೊಂಡ ಮೂಲ ವೇತನವನ್ನು ಮೂರು ಪಟ್ಟು ಹಣವನ್ನು ರಾಜ್ಯ ಸರ್ಕಾರ ಭರಿಸಲಿದೆ.
ಸರ್ಕಾರಿ ನೌಕರರ ಸುಮಾರು 300 ಕೋಟಿ ರೂ. ಗಳಷ್ಟು ಹಣ ಈ ಯೋಜನೆಗೆ ಕಡಿತಗೊಳ್ಳಲಿದ್ದು, ರಾಜ್ಯ ಸರ್ಕಾರ 300 ಕೋಟಿ ರೂ. ಜೊತೆಗೆ 900 ಕೋಟಿ ರೂ. ವಿನಿಯೋಗಿಸಲಿದೆ. ವಾರ್ಷಿಕ 1,200 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ ಎನ್ನಲಾಗಿದೆ.
BIGG NEWS : ಶಬರಿಮಲೆ ಹಾಗೂ ಓಂಶಕ್ತಿ ಯಾತ್ರೆಗೆ ಹೋಗಿಬಂದವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ
Disclaimer
This story is auto-aggregated by a computer program and has not been created or edited by Dailyhunt Publisher: Kannada News Now