ಕರ್ನಾಟಕ
ಹಾಸನದಲ್ಲಿ ದರೋಡೆಗೆ ಒಳಗಾದ ಪೊಲೀಸ್ ಪೇದೆಯಿಂದಲೇ ದೂರು ಸ್ವೀಕರಿಸದ ನಾಲ್ವರು ಪೊಲೀಸರು ಅಮಾನತು

ಹಾಸನ : ಕಾರ್ಯನಿಮಿತ್ತ ಹಾಸನಕ್ಕೆ ಕೇರಳದ ಪೊಲೀಸ್ ಪೇದೆಯೊಬ್ಬರು ಆಗಮಿಸಿದ್ದರು. ರೈಲು ಮೂಲಕ ನಗರಕ್ಕೆ ಬಂದಿದ್ದ ಅವರು, ರೈಲ್ವೆ ನಿಲ್ದಾಣ ಸಮೀಪ ರೈಲು ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ, ದರೋಡೆಕೋರರು ಅವರಿಂದ ಬೆದರಿಸಿ ಹಣ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ರೇ.. ಘಟನೆ ನಡೆದ ಸ್ಥಳ ನಮ್ಮ ವ್ಯಾಪ್ತಿಗೆ ಬರೋದಿಲ್ಲ.. ನಮ್ಮ ವ್ಯಾಪ್ತಿಗೆ ಬರೋದಿಲ್ಲ ಎಂಬುದಾಗಿ ನಗರ ಠಾಣೆ ಹಾಗೂ ಬಡಾವಣೆ ಠಾಣೆ ಪೊಲೀಸರು ಹೇಳಿದ್ದರು. ಈ ಕಾರದಿಂದಾಗಿ ಇದೀಗ ನಗರ ಠಾಣೆಯ ಇಬ್ಬರು, ಬಡಾವಣೆ ಠಾಣೆಯ ಇಬ್ಬರು ಪೇದೆಗಳನ್ನು ಅಮಾನತುಗೊಳಿಸಲಾಗಿದೆ.
ಕೊಟ್ಟ ಮಾತಿನಂತೆ ಕೆಲಸ ಕೊಡಿಸಿದ 'ಕುಮಾರಣ್ಣ' : 'ನೊಂದ ಜೀವ'ದಲ್ಲಿ ಈಗ 'ಹೊಸ ಉತ್ಸಾಹದ ಚಿಲುಮೆ'
ಇತ್ತೀಚೆಗೆ ಹಾಸನಕ್ಕೆ ಕಾರ್ಯನಿಮಿತ್ತ ಆಗಮಿಸಿದ್ದಂತ ಕೇರಳ ಪೊಲೀಸ್ ಪೇದೆಯೊಬ್ಬರು, ರೈಲಿನಿಂದ ಇಳಿದು ತೆರಳುತ್ತಿದ್ದಾಗ ರೈಲ್ವೆ ನಿಲ್ದಾಣದ ಸಮೀಪದಲ್ಲೇ ದರೋಡೆಗೆ ಒಳಗಾಗಿದ್ದರು. ಹಣ ಹಾಗೂ ಮೊಬೈಲ್ ರಾಬರಿ ಮಾಡಲಾಗಿತ್ತು. ಈ ಸಂಬಂಧ ಕೇರಳ ಪೊಲೀಸ್ ಪೇದೆ ನಗರ ಠಾಣೆಗೆ ತೆರಳಿದಾಗ, ದರೋಡೆ ಕೃತ್ಯ ನಡೆದ ಸ್ಥಳ ತಮ್ಮ ವ್ಯಾಪ್ತಿಯಲ್ಲಿ ಬರೋದಿಲ್ಲ, ಬಡಾವಣೆ ಠಾಣೆಗೆ ಹೋಗುವಂತೆ ಕಳುಹಿಸಿದ್ದಾರೆ.
ಈ ಬಳಿಕ ಕೇರಳ ಪೊಲೀಸ್ ಪೇದೆ ಬಡಾವಣೆ ಠಾಣೆಗೆ ತೆರಳಿದ್ರೇ.. ಠಾಣೆಯಲ್ಲಿದ್ದಂತ ಇಬ್ಬರು ಪೇದೆಗಳು ಅವರ ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಇದರಿಂದಾಗಿ ಬೇಸರಗೊಂಡ ಪೇದೆ ಎರಡು ದಿನಗಳ ಬಳಿಕ ಊರಿಗೆ ತೆರಳಿ, ಕೇರಳ ಪೊಲೀಸ್ ಮಹಾನಿರ್ದೇಶಕರಿಗೆ ಹಾಸನದಲ್ಲಿ ತಮ್ಮನ್ನು ದರೋಡೆ ಮಾಡಿದ ಬಗ್ಗೆ ದೂರು ಸಲ್ಲಿಸಿದ್ದಾರೆ.
ನಾಳೆಯಿಂದ 'ವಿಧಾನಮಂಡಲ' ಅಧಿವೇಶನ ಆರಂಭ : ಫೆ.5ರವರೆಗೆ 'ವಿಧಾನಸೌಧ' ಸುತ್ತ-ಮುತ್ತ 'ನಿಷೇಧಾಜ್ಞೆ ಜಾರಿ'
ಪೊಲೀಸ್ ಪೇದೆಯ ದೂರು ನೀಡಿದಂತ ಹಿನ್ನಲೆಯಲ್ಲಿ ಕೇರಳ ಪೊಲೀಸ್ ಮಹಾ ನಿರ್ದೇಶಕರು, ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾದಂತ ಪ್ರವೀಣ್ ಸೂದ್ ಅವರ ಗಮನಕ್ಕೆ ತಂದಿದ್ದಾರೆ. ಕೇರಳ ಪೊಲೀಸ್ ಮಹಾನಿರ್ದೇಶಕ ಮಾಹಿತಿಯ ಹಿನ್ನಲೆಯಲ್ಲಿ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಘಟನೆಯ ವಿವರ ನೀಡಿ, ತಾವು ತಮ್ಮ ಅಧೀನದ ಪೊಲೀಸರನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡಿಕೊಳ್ಳಲು ಏಕೆ ಸಾಧ್ಯ ಆಗುತ್ತಿಲ್ಲ ಎಂಬುದಾಗಿ ಸಮಜಾಯಿಸಿ ಕೇಳಿ ಪತ್ರ ಬರೆದಿದ್ದಾರೆ. ಇದರಿಂದಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ನೋಟಿಸ್ ಹಿನ್ನಲೆಯಲ್ಲಿ, ಹಾಸನದ ನಗರ ಠಾಣೆಯ ಇಬ್ಬರು ಪೊಲೀಸ್ ಹಾಗೂ ಬಡಾವಣೆ ಠಾಣೆಯ ಇಬ್ಬರು ಪೊಲೀಸ್ ಪೇದಗಳು ಸೇರಿದಂತೆ ನಾಲ್ವರನ್ನು ಅಮಾನತ್ತು ಮಾಡಿ, ಎಸ್ಪಿ ಆದೇಶಿಸಿದ್ದಾರೆ.