Thursday, 29 Jul, 10.38 am Kannada News Now

ಹೋಮ್
ಹಣ ತುಂಬಿದ ಬ್ಯಾಗ್ ಬಸ್ ನಲ್ಲೇ ಬಿಟ್ಟು ಹೋದ ಪ್ರಯಾಣಿಕ : ಬ್ಯಾಗ್ ಮರಳಿ ಪ್ರಯಾಣಿಕನಿಗೆ ನೀಡಿ, ಪ್ರಾಮಾಣಿಕತೆ ಮೆರೆದ KSRTC ಚಾಲಕ-ನಿರ್ವಾಹ

ಕೊಪ್ಪಳ : ಪ್ರಯಾಣಿಕರೊಬ್ಬರು ಹಣ ತುಂಬಿದ್ದಂತ ಬ್ಯಾಗ್ ವೊಂದನ್ನು ಬಸ್ ನಲ್ಲಿಯೇ ಬಿಟ್ಟು ಹೋಗಿದ್ದರು. ಇಂತಹ ಹಣವಿದ್ದಂತ ಬ್ಯಾಗ್ ಅನ್ನು, ಮರಳಿ ಪ್ರಯಾಣಿಕನಿಗೆ ತಲುಪಿಸೋ ಮೂಲಕ, ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕ ಮೆರೆದಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕನಕಪುರ : ಕಾಡಾನೆಗಳ ದಾಳಿಯಿಂದ ಫಸಲಿಗೆ ಬಂದಿದ್ದ ಬಾಳೆ ನಾಶ

ರಾಯಚೂರಿನಿಂದ ಗಂಗಾವತಿಗೆ ತೆರಳುತ್ತಿದ್ದಂತ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ನರಸಿಂಹ ಎಂಬುವರು ಪ್ರಯಾಣಸಿದ್ದರು. ಸಿಂಧನೂರಿನ ಬಳಿಯಲ್ಲಿ ತಮ್ಮೊಂದಿಗೆ ತಂದಿದ್ದಂತ ಬ್ಯಾಗ್ ಒಂದನ್ನು ಬಸ್ ನಲ್ಲಿಯೇ ಬಿಟ್ಟು ಹೋಗಿದ್ದರು. ಆ ಬ್ಯಾಗ್ ಅನ್ನು ಚಾಲಕ ಮಡಿವಾಳ ಯಮನೂರ ಹಾಗೂ ನಿರ್ವಾಹಕ ರುದ್ರಪ್ಪ ಪರಿಶೀಲಿಸಿದಾಗ, ಅದರಲ್ಲಿ ಹಣ ಇರೋದು ತಿಳಿದು ಬಂದಿದೆ.

ಕರಾವಳಿಯಲ್ಲೊಂದು ಅಪರೂಪದ ಘಟನೆ : ಸಾವಿನಲ್ಲೂ ಒಂದಾದ ಅಣ್ಣ-ತಂಗಿ

ಹೀಗೆ ಹಣವಿದ್ದ ಬ್ಯಾಗ್ ಅನ್ನು, ಗಂಗಾವತಿಯ ಡಿಪೋ ಮ್ಯಾನೇಜರ್ ಗೆ ಯಾರಾದರೂ ಕೇಳಿಕೊಂಡು ಬಂದರೇ ವಾಪಾಸ್ ನೀಡುವಂತೆ ನೀಡಿ, ಪ್ರಾಮಾಣಿಕತೆ ಮೆರೆದಿದ್ದಾರೆ. ತಾವು ಬ್ಯಾಗ್ ಬಿಟ್ಟು ಹೋಗಿದ್ದನ್ನು ನೆನಪಿಸಿಕೊಂಡಂತ ನರಸಿಂಹ ಗಂಗಾವತಿಗೆ ಬಂದು ಡಿಪೋದಲ್ಲಿ ವಿಚಾರಿಸಿದಾಗ, ಅವರ ಹಣವಿದ್ದ ಬ್ಯಾಗ್ ಅನ್ನು ಮರಳಿ ನೀಡಿದ್ದಾರೆ. ಹೀಗಾಗಿ ಹಣವಿದ್ದ ಬ್ಯಾಗ್ ಮರಳಿ ಪ್ರಾಮಾಣಿಕವಾಗಿ ಹಿಂದಿರುಗಿಸಿದಂತ ಚಾಲಕ ಮಡಿವಾಳ ಯಮನೂರ ಹಾಗೂ ನಿರ್ವಾಹಕ ರುದ್ರಪ್ಪ ಅವರಿಗೆ ನರಸಿಂಹ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Kukke Subramanya Temple : ಇಂದಿನಿಂದ 'ಸುಬ್ರಹ್ಮಣ್ಯ ದೇವಸ್ಥಾನ'ದಲ್ಲಿ 'ಸರ್ಪ ಸಂಸ್ಕಾರ' ಸೇವೆ ಆರಂಭDailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top