Friday, 30 Apr, 11.27 am Kannada News Now

ಭಾರತ
ಹೆಚ್ಚಿನ ರಾಜ್ಯಗಳಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಸಾಧ್ಯತೆ ಕಡಿಮೆ

ನವದೆಹಲಿ:ಪ್ರಧಾನಿ ಮೋದಿಯವರು ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೆ ಕೋವಿಡ್ ಲಸಿಕೆ ಹಾಕುವುದಾಗಿ ಹೇಳಿದ್ದರು. ಆದರೆ ಕೇಂದ್ರ ಸರ್ಕಾರದ ಅಭಿಯಾನ ಬಹುತೇಕ ರಾಜ್ಯಗಳಲ್ಲಿ ನಾಳೆ ಆರಂಭವಾಗುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.

ಬಹುತೇಕ ರಾಜ್ಯಗಳಲ್ಲಿ ಲಸಿಕೆ ಸಂಗ್ರಹದ ಕೊರತೆಯಿದ್ದು ಅಭಿಯಾನ ಇನ್ನಷ್ಟು ತಿಂಗಳು ಮುಂದೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ಪಂಜಾಬ್, ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಅಭಿಯಾನವನ್ನು ಮುಂದೂಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಮಧ್ಯ ಪ್ರದೇಶ ಮತ್ತು ತಮಿಳು ನಾಡು ರಾಜ್ಯಗಳು ಈಗಾಗಲೇ ಆರಂಭಿಸಿರುವ ಅಭಿಯಾನವನ್ನು ಪೂರೈಸಲು ಹೆಣಗಾಡುತ್ತಿವೆ. ಇಲ್ಲಿ ಕೂಡ ಲಸಿಕೆ ಸಿಗುವ ಬಗ್ಗೆ ಗೊಂದಲವಿದೆ. ಇನ್ನು ಆಂಧ್ರ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಸಿಗಲು ಸೆಪ್ಟೆಂಬರ್ ತಿಂಗಳಾಗಬಹುದು ಎಂದು ಸಿಎಂ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.

ಕೇರಳ ರಾಜ್ಯಕ್ಕೆ ಈ ವಾರ 3.5 ಲಕ್ಷ ಡೋಸ್ ಕೊರೋನಾ ಲಸಿಕೆ ಸಿಕ್ಕಿದ್ದು ಇನ್ನೂ 1 ಲಕ್ಷ ಸದ್ಯದಲ್ಲಿಯೇ ಸಿಗಬಹುದು, ಅಲ್ಲಿನ ಸರ್ಕಾರ ಸದ್ಯ 45 ವರ್ಷದವರಿಗಿಂತ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡುವ ಬಗ್ಗೆ ಗಮನ ಹರಿಸಿದೆ.







Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top