ಹಿಂದಿ ಆಲ್ಬಮ್ ಸಾಂಗ್‌ನಲ್ಲಿ ಕನ್ನಡದ ಬೆಡಗಿ ಸಹೇರಾ ಅಫ್ಜಾ

Thursday, 26 Apr, 3.19 am

ಸಿನಿಮಾಡೆಸ್ಕ್: ಕನ್ನಡದ ನಟಿ ಹಾಗೂ ರೂಪದರ್ಶಿ ಸಾಹೇರ ಅಫ್ಜಾ ಬಾಲಿವುಡ್‌ನ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಯಾರಿ ಹಾಗು ಜ್ಯುವೆಲ್ರಿ ಬ್ರಾಂಡ್ಗಳಿಗೆ ಬ್ರಾಂಡ್ ಮಾಡಲ್ ಆಗಿದ ಸಾಹೀರ ಅಫ್ಜಾ ಈಗ ಬಾಲಿವುಡ್‌ನ ಖ್ಯಾತ ಖಳನಟ ಏಝಜ್ ಖಾನ್ ಜೊತೆ ಕುಚ್ ಇಸ್ ತರ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಇದೀಗ ತಾನೆ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಟ್ಟಿರೊ ಸಾಹೀರ ಅಫ್ಜಾ ಬೀಗ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ತಾವು ಬಾಲಿವುಡ್ಗೆ ಎಂಟ್ರಿ ಸಿಕ್ಕಿದ್ದು ಖುಷಿ ತಂದುಕೊಟ್ಟಿದೆ‌ಯಂತೆ ಮಾಧ್ಯಮಗಳ ಜೊತೆ ಖುಷಿಯನ್ನು ಹಂಚಿಕೊಂಡಿದ್ದಾರೆ.