Monday, 18 Jan, 3.17 pm Kannada News Now

ಭಾರತ
ಹಿಂದಿನ ಸರ್ಕಾರಕ್ಕೆ ಆಧುನಿಕ ದೃಷ್ಟಿಕೋನವಿರಲಿಲ್ಲ : ಪ್ರಧಾನಿ ಮೋದಿ

ಅಹಮದಾಬಾದ್: ಅಹಮದಾಬಾದ್ ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ಮತ್ತು ಸೂರತ್ ಮೆಟ್ರೊ ರೈಲು ಯೋಜನೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ದೇಶದ 27 ನಗರಗಳಿಗೆ ಸಾವಿರ ಕಿಲೋ ಮೀಟರ್ ಉದ್ದದ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.

ನಮ್ಮ ದೇಶದಲ್ಲಿ ಮೆಟ್ರೊ ರೈಲು ಯೋಜನೆ ಬಗ್ಗೆ ಆಧುನಿಕವಾಗಿ ಯೋಚಿಸದ, ಯೋಜನೆ ಹೊಂದಿರದ ದಿನಗಳಿದ್ದವು. ಇದರಿಂದಾಗಿ ವಿವಿಧ ಮೆಟ್ರೊ ನಗರಗಳಲ್ಲಿ ವಿವಿಧ ರೀತಿಯಲ್ಲಿ ಮೆಟ್ರೊ ರೈಲು ಸಂಪರ್ಕ ಜಾಲ ಸೃಷ್ಟಿಯಾಯಿತು. ಅಹಮದಾಬಾದ್ ನ ಮತ್ತು ಸೂರತ್ ನ ಮೆಟ್ರೊ ಸಂಪರ್ಕ ಜಾಲವು ದೇಶದ ಎರಡು ಪ್ರಮುಖ ಉದ್ಯಮ ಕೇಂದ್ರದ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದ್ದು, ಕೇಂದ್ರ ಸರ್ಕಾರ ಆಂತರಿಕ ನಗರ ಸಂಚಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದರು.

ತಮ್ಮ ನೇತೃತ್ವದ ಸರ್ಕಾರ ಮತ್ತು ಹಿಂದಿನ ಯುಪಿಎ ಸರ್ಕಾರ ಮೆಟ್ರೊ ರೈಲು ಸಂಪರ್ಕವನ್ನು ವಿಸ್ತರಿಸುವ ಬಗ್ಗೆ ಬೇರೆ ಬೇರೆ ದೃಷ್ಟಿಕೋನವನ್ನು ಹೊಂದಿವೆ ಎಂದು ಪ್ರಧಾನಿ ಮೋದಿ ಹೋಲಿಕೆ ಮಾಡಿದರು. 2014ಕ್ಕಿಂತ ಮೊದಲು 10ರಿಂದ 12 ವರ್ಷಗಳಲ್ಲಿ 225 ಕಿಲೋ ಮೀಟರ್ ಮೆಟ್ರೊ ರೈಲು ಸಂಚಾರ ಕಾರ್ಯನಿರ್ವಹಣೆ ಪ್ರಾರಂಭಿಸಿದ್ದವು. ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರಕ್ಕೆ ಆಧುನಿಕ ದೃಷ್ಟಿಕೋನವಿರಲಿಲ್ಲ ಎಂದು ಮೋದಿ ಈ ಸಂದರ್ಭದಲ್ಲಿ ಆರೋಪಿಸಿದರು.

ಎರಡನೇ ಹಂತದ ಯೋಜನೆ ಪೂರ್ಣಗೊಳ್ಳಲು ವೆಚ್ಚ ಸುಮಾರು 5 ಸಾವಿರದ 384 ಕೋಟಿ ರೂಪಾಯಿಗಳಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ ಸೇರಿಕೊಳ್ಳಿ
https://bit.ly/3qpeEBBDailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top