ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ ಶಿಕ್ಷಕಿಯೊಬ್ಬರು 3.21 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಮುಷ್ಟೂರು ಗ್ರಾಮದ ನಿವಾಸಿ ಕೆ.ರಾಗಿಣಿ ಎನ್ನುವರಿಗೆ ಇನ್ಸ್ಟಾಗ್ರಾಂನಲ್ಲಿ ಬ್ಲಾಕ್ ಚೈನ್ ಎಂಬ ಕಂಪನಿಯ ಲಿಂಕ್ ಬಂದಿದೆ ಎನ್ನಲಾಗಿದೆ.
ಈ ನಡುವೆ ಬ್ಲಾಕ್ ಚೈನ್ ಆಯಪ್ ಅಕೌಂಟ್ನಲ್ಲಿ ರಾಗಿಣಿ ಹೆಸರಿನಲ್ಲಿ 10 ಲಕ್ಷ ಹಣ ಇರುವುದಾಗಿ ಕಾಣಿಸಿಕೊಂಡಿದೆ. ಇದನ್ನು ವರು ಡ್ರಾ ಮಾಡಿಕೊಳ್ಳುವುದಕ್ಕೆ ಮುಂದಾದ ವೇಳೆಯಲ್ಲಿ ಅವರಿಗೆ ಹಣ ಬಾರದೇ ಇರೋದು ಗಮನಕ್ಕೆ ಬಂದಿದೆ. ಇನ್ನೂ ಸಂಬಂಧಪಟ್ಟ ಕಂಪನಿಗೆ ಕರೆ ಮಾಡಲು ಅವರು ಯತ್ನ ಮಾಡಿದ ವೇಳೆಯಲ್ಲಿ ಅವರಿಂದ ಮೋಸ ಹೋಗಿರುವುದು ಗಮನಕ್ಕೆ ಬಂದಿದೆ. ಇನ್ನೂ ತಮಗೆ ಆಗಿರುವ ಮೋಸಕ್ಕೆ ಸದ್ಯ ಅವರು ಚಿಕ್ಕಬಳ್ಳಾಪುರ ಸಿಇಎನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

