Sunday, 11 Apr, 9.47 pm Kannada News Now

ಭಾರತ
IPL BREAKING : ಸನ್ ರೈಸರ್ಸ್ ಗೆ '188' ರನ್ ಗಳ ಗೆಲುವಿನ ಗುರಿ ನೀಡಿದ ನೈಟ್ ರೈಡರ್ಸ್

ಡಿಜಿಟಲ್ ಡೆಸ್ಕ್ : ಚೆನ್ನೈನ ಎಂಎ ಚಿದಂಬರಂ ಸ್ಡೇಡಿಯಂ ನಲ್ಲಿ ಇಂದು ನಡೆಯುತ್ತಿರುವ ಐಪಿಎಲ್ ಸೀಸನ್ 13 ರ ಮೂರನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಟಾಸ್ ಗೆದ್ದಿರುವ ಸನ್ ರೈಸರ್ಸ್ ಹೈದರಾಬಾದ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.

ಟಾಸ್ ಸೋತು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 187 ರನ್ ಗಳ ಉತ್ತಮ ಮೊತ್ತ ದಾಖಲಿಸಲು ಯಶಸ್ವಿಯಾಯಿತು. 20 ಓವರ್ ಗೆ 6 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿ ಹೈದರಾಬಾದ್ ಗೆ 188 ರನ್ ಗಳ ಗುರಿ ನೀಡಿದೆ. ಇನ್ನೂ, ಹೈದರಾಬಾದ್, ಕೋಲ್ಕತ್ತಾ ನೀಡಿದ ಗುರಿ ತಲುಪುತ್ತಾ, ಯಾವ ತಂಡ ಗೆಲುವಿನ ಪತಾಕೆ ಹಾರಿಸಲಿದೆ ಎಂಬುದನ್ನು ಕಾದು ನೋಡಬೇಕು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣ, ಇಯೋನ್ ಮೋರ್ಗನ್, ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್, ಶಕಿಬ್ ಅಲ್ ಹಸನ್, ಪ್ಯಾಟ್ ಕುಮ್ಮಿನ್ಸ್, ಪ್ರಸಿದ ಕ್ರಿಷ್ಣ , ವರುಣ್ ಚಕ್ರವರ್ತಿ, ಹರ್ಬಝನ್ ಸಿಂಗ್, ಮತ್ತಿತರಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಜಾನಿ ಬೇರ್ ಸ್ಟ್ರೋ, ವೃದ್ದಿ ಮಾನ್ ಶಾ, ಮನಿಷ್ ಪಾಂಡೆ, ವಿಜಯ್ ಶಂಕರ್, ಮೊಹಮ್ಮದ್ ನಬಿ, ರಶಿದ್ ಖಾನ್, ಭುವನೇಶ್ವರ್ ಕುಮಾರ್, ಟಿ ನಟರಾಜನ್ ಮತ್ತು ಸಂದೀಪ್ ಶರ್ಮಾ , ಅಬ್ದುಲ್ ಸಮಾ ಇದ್ದಾರೆ.





Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top