Dailyhunt
ಇರಾನ್ ಪಾಲಿಗೆ ಶತ್ರುವಲ್ಲವೇ ಫ್ರಾನ್ಸ್? ಹಾರ್ಮುಜ್ ಜಲಸಂಧಿಯಲ್ಲಿ ಫ್ರೆಂಚ್ ಹಡಗಿಗೆ ಸಿಕ್ತು 'ಗ್ರೀನ್ ಸಿಗ್ನಲ್'!

ಇರಾನ್ ಪಾಲಿಗೆ ಶತ್ರುವಲ್ಲವೇ ಫ್ರಾನ್ಸ್? ಹಾರ್ಮುಜ್ ಜಲಸಂಧಿಯಲ್ಲಿ ಫ್ರೆಂಚ್ ಹಡಗಿಗೆ ಸಿಕ್ತು 'ಗ್ರೀನ್ ಸಿಗ್ನಲ್'!

Kannada News Now 1 week ago

​ಪ್ಯಾರಿಸ್:ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧದ ಕಿಡಿ ಹೊತ್ತಿಕೊಂಡಿರುವ ಬೆನ್ನಲ್ಲೇ, ಜಾಗತಿಕ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಇರಾನ್‌ನ ಕಠಿಣ ದಿಗ್ಬಂಧನ ಮತ್ತು ಅಮೆರಿಕದ ಎಚ್ಚರಿಕೆಗಳ ಹೊರತಾಗಿಯೂ, ಫ್ರಾನ್ಸ್ ಮೂಲದ ಬೃಹತ್ ಸರಕು ಹಡಗೊಂದು 'ಹಾರ್ಮುಜ್ ಜಲಸಂಧಿ'ಯನ್ನು ಸುರಕ್ಷಿತವಾಗಿ ದಾಟಿದೆ.

ಈ ಘಟನೆಯು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಯು ಮಿತ್ರರಾಷ್ಟ್ರಗಳನ್ನೇ ದೂರ ಮಾಡುತ್ತಿದೆಯೇ ಎಂಬ ಚರ್ಚೆಗೆ ನಾಂದಿ ಹಾಡಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ನೌಕಾಪಡೆ ತೀವ್ರ ನಿಗಾ ಇಟ್ಟಿದ್ದರೂ, ಫ್ರೆಂಚ್ ಕಂಪನಿಗೆ ಸೇರಿದ ಹಡಗು ಯಾವುದೇ ಅಡೆತಡೆಯಿಲ್ಲದೆ ಸಂಚರಿಸಿದೆ. ಇದು ಫ್ರಾನ್ಸ್ ಮತ್ತು ಇರಾನ್ ನಡುವೆ ತೆರೆಮರೆಯಲ್ಲಿ ಯಾವುದಾದರೂ ಒಪ್ಪಂದ ನಡೆದಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.

ಅಧ್ಯಕ್ಷ ಟ್ರಂಪ್ ಅವರು ಈ ಭಾಗದಲ್ಲಿ ಭದ್ರತೆಯ ಜವಾಬ್ದಾರಿಯನ್ನು ಕಡಿಮೆ ಮಾಡುತ್ತಿರುವ ಬೆನ್ನಲ್ಲೇ, ಫ್ರಾನ್ಸ್ ತನ್ನದೇ ಆದ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದು ಅಮೆರಿಕ ಮತ್ತು ಫ್ರಾನ್ಸ್ ನಡುವಿನ ದಶಕಗಳ ಹಳೆಯ ಮಿತ್ರತ್ವದಲ್ಲಿ ಬಿರುಕು ಮೂಡಿಸುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

"ಅಮೆರಿಕ ಮೊದಲು" (America First) ಎಂಬ ಟ್ರಂಪ್ ಅವರ ಧೋರಣೆಯಿಂದಾಗಿ ಐರೋಪ್ಯ ರಾಷ್ಟ್ರಗಳು ಈಗ ತಮ್ಮ ಹಿತಾಸಕ್ತಿ ರಕ್ಷಿಸಿಕೊಳ್ಳಲು ಅಮೆರಿಕದ ಹಂಗಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮುಂದಾಗಿವೆ.ವಿಶ್ವದ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಇಲ್ಲಿ ಫ್ರಾನ್ಸ್‌ನ ಈ ಸಾಹಸವು ಇತರ ದೇಶಗಳಿಗೂ ಧೈರ್ಯ ನೀಡಿದಂತಾಗಿದೆ. ಆದರೆ ಇದು ಅಮೆರಿಕಕ್ಕೆ ಅಸಮಾಧಾನ ತಂದಿದೆ ಎನ್ನಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now