Friday, 30 Apr, 10.35 am Kannada News Now

ವಿಶ್ವ
ಇಸ್ರೆಲ್​ನಲ್ಲಿ ಸಾಮೂಹಿಕ ಸಭೆಯ ವೇಳೆ ಕಾಲ್ತುಳಿತ : 44 ಮಂದಿ ಸಾವು, 100 ಕ್ಕೂ ಹೆಚ್ಚು ಜನರಿಗೆ ಗಾಯ

ಟೆಲ್ ಅವಿವ್: ಉತ್ತರ ಇಸ್ರೆಲ್​ ನಲ್ಲಿ ಗುರುವಾರ ಸಾಮೂಹಿಕ ಸಭೆಯ ವೇಳೆ ನಡೆದ ಕಾಲ್ತುಳಿತದಿಂದಾಗಿ ಸುಮಾರು 44 ಮಂದಿ ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಉತ್ತರ ಇಸ್ರೇಲ್ ನ ಮೌಂಟ್ ಮೆರಾನ್ ನಲ್ಲಿ ಲ್ಯಾಗ್ ಬಿ'ಓಮರ್ ರಜಾದಿನದ ಸಾಮೂಹಿಕ ಆಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 44 ಮಂದಿ ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅದರಲ್ಲಿ ಸುಮಾರು 20 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಡಾ. ಮೆಗೆನ್​ ಡೇವಿಡ್​ ಆಯಡಮ್​ ಹೇಳಿದ್ದಾರೆ.

ಧಾರ್ಮಿಕ ಲ್ಯಾಗ್ ಬಿ'ಓಮರ್ ರಜಾದಿನವನ್ನು ಆಚರಿಸುತ್ತಿದ್ದರು, ಇದು ಇಸ್ರೇಲ್ ನ ಅತಿದೊಡ್ಡ ವಾರ್ಷಿಕ ಸಾರ್ವಜನಿಕ ಕಾರ್ಯಕ್ರಮವಾಗಿದೆ. ಇದು ರಬ್ಬಿ ಶಿಮೋನ್ ಬಾರ್ ಯೋಚಾಯ್ ಎಂಬ ಎರಡನೇ ಶತಮಾನದ ಮಿಶ್ನೈಕ್ ಋಷಿಯ ಮರಣವನ್ನು ಸ್ಮರಿಸುತ್ತದೆ, ಅವರ ಪುಸ್ತಕ 'ದಿ ಜೊಹಾರ್' ಯಹೂದಿ ಅನುಭಾವದ ಅಡಿಪಾಯವಾಗಿದೆ.







Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top