Thursday, 29 Jul, 11.56 am Kannada News Now

ಭಾರತ
`ITR' : ತೆರಿಗೆ ಪಾವತಿದಾರರೇ ಗಮನಿಸಿ : ಅಂಚೆ ಕಚೇರಿಯಲ್ಲೇ ರಿಟರ್ನ್ಸ್ ಸಲ್ಲಿಸಲು ಅವಕಾಶ

ನವದೆಹಲಿ: ಆದಾಯ ತೆರಿಗೆದಾರರಿಗೆ ಭಾರತೀಯ ಅಂಚೆ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಇಂಡಿಯಾ ಪೋಸ್ಟ್ ಈಗ ಹತ್ತಿರದ ಅಂಚೆ ಕಚೇರಿ ಸಾಮಾನ್ಯ ಸೇವೆಗಳ ಕೇಂದ್ರಗಳು (CSC) ಕೌಂಟರ್ ಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ITR) ಪಾವತಿಸುವ ಆಯ್ಕೆಯನ್ನು ನೀಡುತ್ತಿದೆ.

Karnataka Politics : ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ, ಸಂಪುಟಕ್ಕೆ ಸೇರೋದಿಲ್ಲ - ಜಗದೀಶ್ ಶೆಟ್ಟರ್

ತೆರಿಗೆದಾರರು ಹತ್ತಿರದ ಅಂಚೆ ಕಚೇರಿ ಸಿಎಸ್ ಸಿ ಕೌಂಟರ್ ನಲ್ಲಿ ಐಟಿಆರ್ ಸೇವೆಗಳನ್ನು ಸುಲಭವಾಗಿ ಪಡೆಯಬಹುದು. ಈಗ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಹೆಚ್ಚು ದೂರ ಪ್ರಯಾಣಿಸುವ ಅಗತ್ಯವಿಲ್ಲ ಎಂದು ಇಂಡಿಯಾ ಪೋಸ್ಟ್ ಹೇಳಿದೆ.

BIGGNEWS: ಮೋಟಾರು ವಾಹನ ದಾಖಲೆಗಳ ಸಿಂಧುತ್ವ (DL,RC) ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ

ಅಂಚೆ ಕಚೇರಿಯ ಸಿಎಸ್ ಸಿ ಕೌಂಟರ್ ಗಳು ಭಾರತದಾದ್ಯಂತ ಭಾರತೀಯ ನಾಗರಿಕರಿಗೆ ಅಂಚೆ, ಬ್ಯಾಂಕಿಂಗ್ ಮತ್ತು ವಿಮಾ ಸೇವೆಗಳಂತಹ ಹಲವಾರು ಹಣಕಾಸು ಸೇವೆಗಳನ್ನು ಪಡೆಯಲು ಒಂದೇ ಪ್ರವೇಶ ಬಿಂದುವಾಗಿ ಕಾರ್ಯನಿರ್ವಹಿಸುತ್ತವೆ. ಜನರು ಸಿಎಸ್ ಸಿ ಕೌಂಟರ್ ಗಳ ಮೂಲಕ ಹಲವಾರು ಇತರ ಸರ್ಕಾರಿ ಪ್ರಯೋಜನಗಳು ಮತ್ತು ಮಾಹಿತಿಯನ್ನು ಪಡೆಯಬಹುದು ಎಂದು ಹೇಳಿದೆ.

Karnataka Cabinet : ಇನ್ನೊಂದು ವಾರದಲ್ಲೇ ಸಂಪುಟ ರಚನೆ : ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಯಾರು ಇನ್.? ಯಾರು ಔಟ್.?



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top