Monday, 25 Jan, 8.41 am Kannada News Now

ಭಾರತ
ಜ. 25 ರಾಷ್ಟ್ರೀಯ ಪ್ರವಾಸೋಧ್ಯಮ ದಿನ : ದೇಶದ ಪ್ರವಾಸೋದ್ಯಮದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದು ಇಷ್ಟು.

ಸ್ಪೆಷಲ್ ಡೆಸ್ಕ್ : ಭಾರತ ಸರ್ಕಾರ ರಾಷ್ಟ್ರೀಯ ಪ್ರವಾಸೋದ್ಯಮ ದಿನವಾಗಿ ಜನವರಿ 25 ರಂದು ಆಚರಿಸುತ್ತದೆ. ಈ ಆಚರಣೆಗೆ ಮುಖ್ಯ ಕಾರಣ ದೇಶದ ಪ್ರವಾಸಿತಾಣಗಳ ಬಗ್ಗೆ ಜಗತ್ತಿನಾದ್ಯಂತ ತಿಳಿಯಲು ಮತ್ತು ಆರ್ಥಿಕವಾಗಿ ದೇಶ ಮುಂದುವರೆಯಲು ಪ್ರವಾಸೋದ್ಯಮ ಮುಖ್ಯ ಕಾರಣವಾಗಿದೆ.

ಭಾರತಕ್ಕೆ ಪ್ರತಿವರ್ಷ ಕೋಟಿಗಟ್ಟಲೆಯಲ್ಲಿ ವಿದೇಶಿಗರು ಬರುತ್ತಾರೆ. ಇವರಿಗೆ ನಮ್ಮ ದೇಶದ ಬಗ್ಗೆ ತಿಳಿಯಲು ಅವರನ್ನು ಆಕರ್ಷಿಸಲು ಸರ್ಕಾರವು ಇತ್ತೀಚಿಗೆ 2020 ರಲ್ಲಿ ಪ್ರವಾಸೋದ್ಯಮ ದಿನದಂದು ಪ್ರವಾಸೋದ್ಯಮ ಮತ್ತು ಗ್ರಾಮೀಣಾಭಿವೃದ್ಧಿಯ ಬಗ್ಗೆ ತಿಳಿಯಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದು ಕೇವಲ ನಗರವಲ್ಲದೆ ಗ್ರಾಮೀಣ ಜನರಿಗೂ ಇದರಲ್ಲಿ ಅವಕಾಶ ಸಿಗುವಂತಾಗುತ್ತದೆ ಎಂಬ ವಿಷಯವನ್ನು ಮನದಲ್ಲಿಟ್ಟು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಇದು ಪ್ರಪಂಚದಾದ್ಯಂತ ಗ್ರಾಮೀಣ ಕಲೆ , ಸಂಸ್ಕೃತಿ ಮತ್ತು ನೈಸರ್ಗಿಕ ಪರಂಪರೆ ಬಗ್ಗೆ ತಿಳಿಸುವವಲ್ಲಿ ಸಹಾಯ ಮಾಡುತ್ತದೆ.

ಭಾರತದಲ್ಲಿ ಸರಾಸರಿ ಶೇಕಡಾ 7.7 ರಷ್ಟು ಜನ ಪ್ರವಾಸೋದ್ಯಮದಲ್ಲಿ ಕೆಲಸಮಾಡುತ್ತಾರೆ. ಅಲ್ಲದೆ ಭಾರತದ ಆರ್ಥಿಕತೆ ಹೆಚ್ಚಿಸುವಲ್ಲಿ ಬಹಳ ಶ್ರಮ ಪಡುತ್ತಿದ್ದಾರೆ. 2019 ರಲ್ಲಿ ಸರಾಸರಿ 16.9 ದಶಲಕ್ಷ ಕೋಟಿ ಜಿಡಿಪಿ ಪ್ರವಾಸೋದ್ಯಮ ದಿಂದ ದೊರೆತಿದೆ. ಅಂದರೆ ಶೇಕಡಾ 9.2 ರಷ್ಟು ಜಿಡಿಪಿ ಪ್ರವಾಸೋದ್ಯಮದಿಂದ ದೊರೆಯುತ್ತದೆ ಎಂದು ಅರ್ಥ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರವಾಸಿಗರನ್ನು ಆಕರ್ಷಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತ ಬಂದಿದೆ. ಹಾಗೆಯೇ ಯಶಸ್ವಿನ ಹಾದಿಯಲ್ಲಿ ಸಾಗುತ್ತಿದೆ.

ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವರುಣ್ ಧವನ್

ಪ್ರವಾಸೋದ್ಯಮಕ್ಕೆ ಸುಲಭವಾಗಲು ರೈಲ್ವೆ ಇಲಾಖೆಯು ಕೈ ಜೋಡಿಸಿದೆ. ಅಷ್ಟೇ ಅಲ್ಲದೆ ಸ್ವಚ್ಛತೆ , ಸುರಕ್ಷತೆಯ ಬಗ್ಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೆತ್ತಿಕೊಂಡಿವೆ.
ಭಾರತ ಸರ್ಕಾರದ ಪ್ರವಾಸೋದ್ಯಮ ಶರವೇಗದಲ್ಲಿ ಓಡುತ್ತಿರುವ ಕುದುರೆಯಂತೆ ಬೆಳೆಯುತ್ತಿದೆ. ಜನರು ನೋಡಲು ಬರುವ ಸ್ಥಳಗಳಾದ ತಾಜ್ ಮಹಲ್ ದೆಹಲಿ, ಹಂಪಿ ಕರ್ನಾಟಕ, ರಾಜಸ್ಥಾನ್, ಗೋವಾ, ಮುಂಬೈ, ಕೇರಳ, ಅಲ್ಲದೆ ಕುಂಭಮೇಳಗಳಲ್ಲಿ ಭಾಗಿಯಾಗಲು ಇಸ್ರೇಲ್, ಬ್ರೆಜಿಲ್, ಅಮೇರಿಕಾ, ಜರ್ಮನ್ ಗಳಂತ ದೇಶದಿಂದ ವಿದೇಶಿಗರು ಬರುತ್ತಾರೆ. ಯುನೆಸ್ಕೊ ಭಾರತದಲ್ಲಿ 38 ಸ್ಥಳಗಳನ್ನು ವರ್ಲ್ಡ್ ಹೆರಿಟೇಜ್ ಗಳಾಗಿ ಗುರುತಿಸಿದೆ.

ಭಾರತ ಸರ್ಕಾರ ಇ ವೀಸಾ ಪಾಲಿಸಿಯನ್ನು ಜಾರಿಗೆ ತಂದಿದೆ . ಇದು 40 ದೇಶದ ಜನರು ಭಾರತಕ್ಕೆ ಇಳಿದ ಕೂಡಲೇ ಆನ್ ಲೈನ್ ಮೂಲಕ ವೀಸಾ ಪಡೆಯಬಹುದು. ಹೀಗಾಗಿ ವೀಸಾ ಸೆಂಟರ್ ಗೆ ಹೋಗುವ ತೊಂದರೆ ತಪ್ಪಿದಂತಾಗುತ್ತದೆ.

ಪ್ರಪಂಚದಾದ್ಯಂತ ಪ್ರವಾಸೋದ್ಯಮ ದಿನವನ್ನು ಸೆಪ್ಟೆಂಬರ್ 27 ರಂದು ಆಚರಿಸಿದರೆ , ಭಾರತಸರ್ಕಾರ ಜನವರಿ 25 ರಂದು ಆಚರಿಸುತ್ತದೆ. 2019 ರಲ್ಲಿ ಭಾರತವು ಪ್ರವಾಸೋದ್ಯಮದಲ್ಲಿ ಪ್ರಪಂಚದಾದ್ಯಂತ 140 ದೇಶಗಳಲ್ಲಿ 34 ನೇ ಸ್ಥಾನ ಪಡೆದಿದೆ. ಅಂದರೆ ಶೇಕಡಾ 25 ರಷ್ಟು ಬೆಳವಣಿಗೆ ಕಂಡಿದೆ ಇದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ.

ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್‌ ಸೇರಿಕೊಳ್ಳಿ
https://bit.ly/367sVuW



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top