ಜಾತಿ ಪಟ್ಟಿಯಲ್ಲಿ ಕಾಡುಗೊಲ್ಲ, ಹಟ್ಟಿಗೊಲ್ಲ ಹೆಸರು ಸೇರ್ಪಡೆಗೆ C.S.ದ್ವಾರಕನಾಥ್, ನಟ ಚೇತನ್ ಸಿಎಂ ಗೆ ಮನವಿ.!

Wednesday, 17 Jan, 2.32 am

ಬೆಂಗಳೂರು: ಮಧ್ಯ ಹೆಚ್ಚಾಗಿ ಕಂಡು ಬರುವ ಸಮುದಾಯವಾದ ಕಾಡು ಗೊಲ್ಲರನ್ನು ಜಾತಿಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಇಂದು ಸಿ.ಎಂ ಸಿದ್ದರಾಮಯ್ಯ ಅವರನ್ನು ಪ್ರಗತಿಪರ ಚಿಂತಕ ಸಿ.ಎಸ್ ದ್ವಾರಕಾನಾಥ್ ಹಾಗೂ ಚಿತ್ರ ನಟ ಚೇತನ್ ಸೇರಿದಂತೆ ಸಮುದಾಯದ ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಇಂದು ಸಿ.ಎಂ ನೇತೃವದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಪಟ್ಟಿ ಪ್ರವರ್ಗ 1ರ ಅಡಿಯಲ್ಲಿ ಬರುವ ಗೊಲ್ಲ ಜಾತಿಯಿಂದಿಗೆ, ಕಾಡು ಗೊಲ್ಲ ಹಾಗೂ ಹಟ್ಟಿಗೊಲ್ಲ ಎನ್ನುವ ಪರ್‍ಯಾಯ ಪದಗಳನ್ನು ಸೇರಿಸುವಂತೆ ಮನವಿ ಮಾಡಿದರು.

ಸಿ.ಎಂ ಭೇಟಿ ನಂತರ ಮಾತನಾಡಿ ಪ್ರಗತಿಪರ ಚಿಂತಕ ದ್ವಾರಕನಾಥ್ ಮತ್ತು ಚೇತನ್, ಕಾಡುಗೊಲ್ಲ ಎಂ ಅಸ್ಮಿತೆಗಾಗಿ ಈ ಸಮುದಾಯದವರು ಹಲವು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ.