Wednesday, 16 Sep, 7.42 pm Kannada News Now

ಕರ್ನಾಟಕ
ಜೈಲಿಗೆ ಹೋದ್ರೂ 'ಸಂಜನಾ ಗರ್ಲಾನಿ' ಹೈಡ್ರಾಮಾ : ಪೊಲೀಸರ ಜೊತೆ 'ಗಂಡ-ಹೆಂಡ್ತಿ' ಬೆಡಗಿಯ ಕಿರಿಕ್..!

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡ ನಟಿ ಸಂಜನಾ ಗಲ್ರಾನಿಯನ್ನು 1 ನೇ ಎಸಿಎಂಎಂ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈಗಾಗಲೇ ನಟಿ ಸಂಜನಾರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ, ಇದರ ನಡುವೆಯೇ ಸಂಜನಾ ಪೊಲೀಸ್ ಅಧಿಕಾರಿಗಳ ಜೊತೆ ಕಿರಿಕ್ ಮಾಡಿದ್ದಾರೆ ಎನ್ನಲಾಗಿದೆ. 'ಜೈಲಿಗೆ ಎಂಟ್ರಿಕೊಡುವ ವೇಳೆ ಚಿಕ್ಕ ಗೇಟ್ ನಲ್ಲಿ ಹೋಗಲ್ಲ ಎಂದು ನಟಿ ಸಂಜನಾ ಪೊಲೀಸ್ ಅಧಿಕಾರಿಗಳ ಜೊತೆ ಕಿರಿಕ್ ಮಾಡಿದ್ದಾರೆ.

ಸದ್ಯ, ಕ್ವಾರಂಟೈನ್ ಸೆಲ್ ಗೆ ಸಂಜನಾರನ್ನು ಶಿಫ್ಟ್ 'ಮಾಡಲಾಗಿದ್ದು, ಜೈಲಿನಲ್ಲಿಯೇ ಸಂಜನಾಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಕೆಲಹೊತ್ತು ಸಂಜನಾ ಹೈಡ್ರಾಮಾ ನಡೆದಿದೆ ಎನ್ನಲಾಗಿದೆ. ಅದೇನೆ ಇರಲಿ ಗಂಡ ಹೆಂಡತಿ ಸಿನಿಮಾದ ಮೂಲಕ ಕಿಚ್ಚು ಹಚ್ಚಿಸಿದ್ದ ಮಾದಕ ನಟಿಗೆ ಜೈಲೂಟ ಗ್ಯಾರೆಂಟಿಯಾಗಿದೆ.

ಸಂಜನಾ ಜೊತೆಗೆ, ಆರೋಪಿ ವಿರೇನ್ ಖನ್ನಾ, ರವಿಶಂಕರ್ ಮತ್ತು ಇತರರನ್ನು ನ್ಯಾಯಾಂಗ ವಶಕ್ಕೆ ಕಳುಹಿಸಲಾಗಿದೆ. ಸೆಪ್ಟೆಂಬರ್ 16 ರಂದು ಸಂಜನಾ ಮತ್ತು ಇತರ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸ್ಯಾಂಡಲ್ ವುಡ್ ಡ್ರಗ್ ರಾಕೆಟ್ ಪ್ರಕರಣದಲ್ಲಿ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಿದೆ.

ಡ್ರಗ್ಸ್ ಲಿಂಕ್ ಆರೋಪ : ವಿಚಾರಣೆ ಮುಗಿಸಿ ಸ್ಟಾರ್ ದಂಪತಿ ಮನೆಗೆ ವಾಪಸ್ : ಮನಸಾರೆ ಜೋಡಿಯ ಮೊಬೈಲ್ ಸಿಸಿಬಿ ವಶಕ್ಕೆ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top