ಭಾರತ
ಜಮ್ಮು ಕಾಶ್ಮೀರದ ಮ್ಯಾಪ್ ತಪ್ಪಾಗಿ ತೋರಿಸುತ್ತಿದ್ದ ವಿಕಿಪಿಡಿಯಾಗೆ ಕೇಂದ್ರ ಸರ್ಕಾರ ಎಚ್ಚರಿಕೆ

ನವದೆಹಲಿ: ಜಮ್ಮು ಕಾಶ್ಮೀರ ಮ್ಯಾಪ್ ಅನ್ನು ತಪ್ಪಾಗಿ ತೋರಿಸುತ್ತಿದ್ದ ಲಿಂಕ್ ಅನ್ನು ತೆಗೆದುಹಾಕುವಂತೆ ವಿಕಿಪೀಡಿಯಾಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಈ ಆದೇಶ ಹೊರಡಿಸಿದೆ ಎಂದು ಹೇಳಲಾಗಿದೆ. ಈ ಪ್ರಕರಣವು ಟ್ವಿಟರ್ ಬಳಕೆದಾರರೊಬ್ಬರು ಸರ್ಕಾರದ ಗಮನಕ್ಕೆ ತಂದಿದ್ದರು.
ಟ್ವಿಟರ್ ಬಳಕೆದಾರರಾದ ಚತ್ರಾಸಲ್ ಸಿಂಗ್ ಎಂಬುವರು ಭಾರತ-ಭೂತಾನ್ ಸಂಬಂಧಿದ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿಯನ್ನು ತಪ್ಪಾಗಿ ತೋರಿಸುತ್ತಿದ್ದ ವಿಕಿಪೀಡಿಯಾ ಪುಟದ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದರು.ಈ ಕುರಿತು ಗಮನ ಹರಿಸಿದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು ಇತ್ತೀಚೆಗೆ ವಿಕಿಪೀಡಿಯಾದಿಂದ ಭಾರತದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಉಲ್ಲಂಘನೆ ಮಾಡಿದಂತಾಗಿದೆ. ಆದ್ದರಿಂದ ತಪ್ಪಾದ ನಕ್ಷೆಯ ಲಿಂಕ್ ತೆಗೆದುಹಾಕುವಂತೆ ವಿಕಿಪೀಡಿಯಾಗೆ ನಿರ್ದೇಶನ ನೀಡಿದ್ದರು.