ಭಾರತ
ಜನವರಿ ಅಂತ್ಯಕ್ಕೆ ಮತ್ತೆ 3 ರಫೆಲ್ ಭಾರತಕ್ಕೆ ಆಗಮನ ಸಾಧ್ಯತೆ

ನವದೆಹಲಿ: ಈಗಾಗಲೇ 8 ರಫೇಲ್ ಸಮರ ವಿಮಾನಗಳು ಫ್ರಾನ್ಸ್ನಿಂದ ಆಗಮಿಸಿದ್ದು ಇನ್ನೂ ಮೂರು ವಿಮಾನಗಳು ಜನವರಿ ತಿಂಗಳ ಕೊನೆಯಲ್ಲಿ ಬರುವ ಸಾಧ್ಯತೆಯಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಹೇಳಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಜೊತೆಗೆ 5ನೇ ಜನರೇಷನ್ ಯುದ್ಧವಿಮಾನ ಯೋಜನೆ ಆರಂಭಿಸಿದ್ದು, ಯುದ್ಧ ವಿಮಾನಗಳಲ್ಲಿ 6ನೇ ಜನರೇಷನ್ ಸಾಮರ್ಥ್ಯ ಅಳವಡಿಸುವ ಯೋಜನೆಯಿದೆ ಎಂದೂ ಹೇಳಿದರು.
`ಸುಭಾಷ್ ಚಂದ್ರ ಬೋಸ್' ರನ್ನು ಹತ್ಯೆ ಮಾಡಿದ್ದು ಕಾಂಗ್ರೆಸ್ : ಸಂಸದ ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆ
ಭಾರತೀಯ ವಾಯುಪಡೆ (ಐಎಎಫ್) ಹಾಗೂ ಫ್ರಾನ್ಸ್‌ನ ವಾಯುಪಡೆ ಜಂಟಿಯಾಗಿ ನಡೆಸಿದ ವೈಮಾನಿಕ ಕವಾಯತು 'ಡೆಸರ್ಟ್ ನೈಟ್-21' ಸಮಾರೋಪದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ' ಡಿಆರ್‌ಡಿಒ ಜೊತೆಗೆ ಐದನೇ ಜನರೇಷನ್ ಯುದ್ಧ ವಿಮಾನ ಯೋಜನೆಯನ್ನು ಐಎಎಫ್ ಆರಂಭಿಸಿದ್ದು, ಪ್ರಸ್ತುತ ನಮ್ಮ ಬಳಿ ಇರುವ ಆಧುನಿಕ ಯುದ್ಧ ವಿಮಾನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಸೆನ್ಸರ್‌ಗಳನ್ನು ಅಳವಡಿಸುವುದು ಗುರಿಯಾಗಿದೆ' ಎಂದು ತಿಳಿಸಿದರು.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/367sVuW