Dailyhunt Logo
  • Light mode
    Follow system
    Dark mode
    • Play Story
    • App Story
ಜಿಯೋ ಪೇಮೆಂಟ್ ಸೊಲ್ಯೂಷನ್ಸ್‌ನಿಂದ ಅಂತರರಾಷ್ಟ್ರೀಯ ಪಾವತಿ ಸೇವೆ ಆರಂಭ

ಜಿಯೋ ಪೇಮೆಂಟ್ ಸೊಲ್ಯೂಷನ್ಸ್‌ನಿಂದ ಅಂತರರಾಷ್ಟ್ರೀಯ ಪಾವತಿ ಸೇವೆ ಆರಂಭ

Kannada News Now 2 days ago

ಮುಂಬಯಿ: ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಜಿಯೋ ಪೇಮೆಂಟ್ ಸೊಲ್ಯೂಷನ್ಸ್ ಲಿಮಿಟೆಡ್ (ಜೆಪಿಎಸ್‌ಎಲ್), ಭಾರತೀಯ ರಫ್ತುದಾರರು ಹಾಗೂ ಉದ್ಯಮಗಳಿಗೆ ಜಾಗತಿಕ ಮಟ್ಟದಲ್ಲಿ ಹಣ ಸ್ವೀಕರಿಸಲು ಅನುಕೂಲವಾಗುವಂತೆ ಹೊಸ 'ಕ್ರಾಸ್-ಬಾರ್ಡರ್' (ಅಂತರರಾಷ್ಟ್ರೀಯ) ಪಾವತಿ ಸೇವೆಯನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಭಾರತೀಯ ರಫ್ತು ಮತ್ತು ಆಮದುಗಳಿಗಾಗಿ 'ಪಾವತಿ ಅಗ್ರಿಗೇಟರ್' ಪಿಎ-ಸಿಬಿ) ಆಗಿ ಕಾರ್ಯನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಅಧಿಕೃತ ಅನುಮೋದನೆ ಪಡೆದ ನಂತರ ಈ ಮಹತ್ವದ ಸೇವೆಯನ್ನು ಪರಿಚಯಿಸಲಾಗಿದೆ.

ಪ್ರಸ್ತುತ ಆನ್‌ಲೈನ್ ಮಾರಾಟಗಾರರು, ಡಿಜಿಟಲ್ ಉದ್ಯಮಿಗಳು, ಫ್ರೀಲ್ಯಾನ್ಸರ್‌ಗಳು, ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ಸಾಫ್ಟ್‌ವೇರ್ (SaaS) ಕಂಪನಿಗಳು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿವೆ. ಆದರೆ ಅಂತರರಾಷ್ಟ್ರೀಯ ಹಣವನ್ನು ಸಂಗ್ರಹಿಸುವುದು ದೀರ್ಘಕಾಲದ ಕಾಗದಪತ್ರಗಳು ಮತ್ತು ಸಂಕೀರ್ಣ ಪ್ರಕ್ರಿಯೆಗಳಿಂದ ಕೂಡಿದೆ. ಜಿಯೋ ಪೇಮೆಂಟ್ ಸೊಲ್ಯೂಷನ್ಸ್‌ ಈ ಎಲ್ಲಾ ಸವಾಲುಗಳಿಗೆ ತಂತ್ರಜ್ಞಾನ ಆಧಾರಿತ ಸುಲಭ ಪರಿಹಾರವನ್ನು ಒದಗಿಸಿದ್ದು, ಜಾಗತಿಕ ಸಂಗ್ರಹಣೆಯನ್ನು ಸರಳಗೊಳಿಸಿದೆ.

ಜಿಯೋ ಕ್ರಾಸ್-ಬಾರ್ಡರ್ ಪಾವತಿ ಸೇವೆಯ ಪ್ರಮುಖ ವಿಶೇಷತೆಗಳು:

ಜಾಗತಿಕ ವ್ಯಾಪ್ತಿ ಮತ್ತು ಸ್ಥಳೀಯ ಆಯ್ಕೆ: ಅಮೆರಿಕ, ಬ್ರಿಟನ್, ಯುರೋಪ್, ಯುಎಇ, ಸಿಂಗಾಪುರ್, ಮಲೇಷ್ಯಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಪ್ರಮುಖ ದೇಶಗಳಿಗೆ ರಫ್ತು ಮಾಡುವ ಭಾರತೀಯ ವ್ಯಾಪಾರಿಗಳಿಗೆ ಇದು ಸಹಕಾರಿಯಾಗಿದೆ. ಗ್ರಾಹಕರು ತಮ್ಮದೇ ಸ್ಥಳೀಯ ಕರೆನ್ಸಿಯಲ್ಲಿ ಹಣ ಪಾವತಿಸಲು ಇದು ಅವಕಾಶ ಕಲ್ಪಿಸುತ್ತದೆ.

ಎಲ್ಲಾ ತರಹದ ವ್ಯವಹಾರಗಳಿಗೆ ಸೂಕ್ತ: ಸಣ್ಣ ಉದ್ಯಮಗಳಿಂದ ಹಿಡಿದು ದೊಡ್ಡ ಡಿಜಿಟಲ್ ಕಂಪನಿಗಳವರೆಗೆ ಎಲ್ಲರಿಗೂ ಅನುಕೂಲವಾಗುವಂತೆ ಪೇಮೆಂಟ್ ಲಿಂಕ್‌ಗಳು, ಹೋಸ್ಟೆಡ್ ಚೆಕ್‌ಔಟ್‌ಗಳು ಮತ್ತು ಎಪಿಐ ಗಳಂತಹ ವಿವಿಧ ತಂತ್ರಜ್ಞಾನ ಆಯ್ಕೆಗಳನ್ನು ಒದಗಿಸಲಾಗಿದೆ.

ಉನ್ನತ ದಕ್ಷತೆ ಮತ್ತು ತ್ವರಿತ ಪಾವತಿ: ಪಾರದರ್ಶಕ ಬೆಲೆ ನಿಗದಿ ವ್ಯವಸ್ಥೆಯಿದ್ದು, ವ್ಯಾಪಾರಿಗಳು ಯಾವುದೇ ಕಡಿತವಿಲ್ಲದೆ ನಿಗದಿತ ಸಮಯದಲ್ಲಿ ನೇರವಾಗಿ ತಮ್ಮ ಹಣವನ್ನು ಪಡೆದುಕೊಳ್ಳಬಹುದು. ಇದು ಉತ್ತಮ ಹಣಕಾಸು ನಿರ್ವಹಣೆಗೆ ನೆರವಾಗುತ್ತದೆ.

ಬ್ಯಾಂಕ್ ಮಟ್ಟದ ಭದ್ರತೆ: ಆರ್‌ಬಿಐ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಂಪೂರ್ಣ ಭದ್ರತೆ, ಎನ್‌ಕ್ರಿಪ್ಷನ್ ಮತ್ತು ತ್ವರಿತ ದಾಖಲಾತಿ (eFIRA) ಸೌಲಭ್ಯವನ್ನು ಇದು ಒಳಗೊಂಡಿದೆ.

ಈ ಹೊಸ ಸೇವೆಯ ಕುರಿತು ಮಾತನಾಡಿದ ಜಿಯೋ ಪೇಮೆಂಟ್ ಸೊಲ್ಯೂಷನ್ಸ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಕಾಶಿನಾಥ್ ಹರಿಹರನ್, "ಜಾಗತಿಕ ಆರ್ಥಿಕತೆಯಲ್ಲಿ ಭಾರತೀಯ ಉದ್ಯಮಗಳು ದೊಡ್ಡ ಪಾತ್ರ ವಹಿಸುತ್ತಿವೆ. ನಾವು ಅಂತರರಾಷ್ಟ್ರೀಯ ಪಾವತಿಗಳಲ್ಲಿರುವ ತೊಡಕುಗಳನ್ನು ನಿವಾರಿಸಿ, ವ್ಯವಹಾರಗಳನ್ನು ಹೆಚ್ಚು ಸರಳಗೊಳಿಸುತ್ತಿದ್ದೇವೆ. ಜಿಯೋದ ವಿಶ್ವಾಸಾರ್ಹ ಬ್ರ್ಯಾಂಡ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ" ಎಂದರು.

ಸಿಟಿ ಬ್ಯಾಂಕ್‌ನ ದಕ್ಷಿಣ ಏಷ್ಯಾ ವಿಭಾಗದ ಮುಖ್ಯಸ್ಥೆ ಮೃದುಲಾ ಅಯ್ಯರ್‌ ಮಾತನಾಡಿ, " ಜಾಗತಿಕ ಮಟ್ಟದ ಕ್ಲಿಯರಿಂಗ್ ಜಾಲವನ್ನು ಹೊಂದಿರುವ ಸಿಟಿ ಬ್ಯಾಂಕ್ ಜಿಯೋದ ಈ ಸೇವೆಗೆ ಅಧಿಕೃತ ಪಾಲುದಾರನಾಗಿದ್ದು, ಇದು ರಫ್ತುದಾರರಿಗೆ ಹಣ ವರ್ಗಾವಣೆಯನ್ನು ಮತ್ತಷ್ಟು ಸುಲಭಗೊಳಿಸಲಿದೆʼʼ ಎಂದು ತಿಳಿಸಿದರು.

ಈ ಹೊಸ ಸೇವೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾಯಿಸಲು https://www.jiopay.in/accept-payment-world ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Dailyhunt
Disclaimer: This content has not been generated, created or edited by Dailyhunt. Publisher: Kannada News Now