Friday, 24 Sep, 11.18 am Kannada News Now

ಕರ್ನಾಟಕ
ಕಾಂಗ್ರೆಸ್ ಟಾಂಗಾ, ಸೈಕಲ್ ಓಡಿಸೋದಕ್ಕೆ ಮಾತ್ರ ಸೀಮಿತ : ಸಚಿವ ಆರ್. ಅಶೋಕ್

ಬೆಂಗಳೂರು : ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಇಂದು ಟಾಂಗಾದ ಮೂಲಕ ವಿಧಾನಸೌಧಕ್ಕೆ ಬಂದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರು ಕಂದಾಯ ಸಚಿವ ಆರ್. ಅಶೋಕ್ ಈಗಾಗಲೇ ಮೂಲೆ ಗುಂಪಾಗಿರುವ ಕಾಂಗ್ರೆಸ್ಸಿಗರು ಟಾಂಗಾ ಹಾಗೂ ಸೈಕಲ್ ಓಡಿಸುವುದಕ್ಕೆ ಮಾತ್ರ ಸೀಮಿತ ಎಂದು ಲೇವಡಿ ಮಾಡಿದ್ದಾರೆ.

ಸರಿಯಾಗಿ 'ಹೇರ್ ಕಟ್' ಮಾಡದೇ ಎಡವಟ್ಟು : 'ಸಲೂನ್ ಮಾಲೀಕ'ನಿಗೆ ನ್ಯಾಯಾಲಯ ವಿಧಿಸಿದ ದಂಡ ಎಷ್ಟು ಗೊತ್ತಾ.?

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೂಲೆ ಗುಂಪಾಗಿರುವ ಕಾಂಗ್ರೆಸ್ಸಿಗರು ಟಾಂಗಾ ಹಾಗೂ ಸೈಕಲ್ ಓಡಿಸುವುದಕ್ಕೆ ಮಾತ್ರ ಸೀಮಿತ, ಕಾಂಗ್ರೆಸ್ಸಿಗರು ಸೋತು ಸುಣ್ಣ ಆದ ಮೇಲೆ ದಿನಕ್ಕೊಂದು ಗಿಮಿಕ್ ಮಾಡುತ್ತಾ ಇದ್ದಾರೆ. ಕಾಂಗ್ರೆಸ್ಸಿನವರು ಇದ್ದಾಗ ಬೆಲೆ ಏರಿಕೆಯಾದ್ರೆ ಆರ್ಥಿಕ ಸುಧಾರಣೆಗಾಗಿ ಅಂತಾರೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಬೆಲೆ ಏರಿಕೆಯಾದ್ರೆ ಅದು ಅಕ್ರಮ, ಅನೈತಿಕ ಅಂತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ತಂಬಾಕು ಹರಾಜು ಪೂಜೆಗೆ ಹೋಗಿದ್ದ ಸಂಸದ ಪ್ರತಾಪ್ ಸಿಂಹಗೆ ರೈತರಿಂದ ಘೇರಾವ್



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top