Dailyhunt
'ಕೈ ಮೀರುವ ಮುನ್ನ ಒಪ್ಪಂದಕ್ಕೆ ಬನ್ನಿ!': ಇರಾನ್‌ಗೆ ಡೊನಾಲ್ಡ್ ಟ್ರಂಪ್ ಖಡಕ್ ವಾರ್ನಿಂಗ್

'ಕೈ ಮೀರುವ ಮುನ್ನ ಒಪ್ಪಂದಕ್ಕೆ ಬನ್ನಿ!': ಇರಾನ್‌ಗೆ ಡೊನಾಲ್ಡ್ ಟ್ರಂಪ್ ಖಡಕ್ ವಾರ್ನಿಂಗ್

Kannada News Now 1 week ago

ತೆಹ್ರಾನ್:ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನ ಆಯಕಟ್ಟಿನ 'ಬಿ1 ಸೇತುವೆ' (B1 Bridge) ಮೇಲೆ ಭೀಕರ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿದ್ದಾರೆ. "ಸಮಯ ಮಿಂಚುವ ಮುನ್ನ ಸಂಧಾನಕ್ಕೆ ಬನ್ನಿ, ಇಲ್ಲದಿದ್ದರೆ ಪರಿಸ್ಥಿತಿ ನಿಮ್ಮ ಕೈ ಮೀರಿ ಹೋಗಲಿದೆ" ಎಂದು ಟ್ರಂಪ್ ಗುಡುಗಿದ್ದಾರೆ.

ಇರಾನ್‌ನ ಅತ್ಯಂತ ಪ್ರಮುಖ ಸಾಗಾಣಿಕಾ ಮಾರ್ಗವಾದ ಬಿ1 ಸೇತುವೆಯ ಮೇಲೆ ಇಸ್ರೇಲ್ ಮತ್ತು ಅಮೆರಿಕ ಪಡೆಗಳು ನಡೆಸಿದ ದಾಳಿಯು ಇರಾನ್‌ನ ಸೇನಾ ಚಲನವಲನಕ್ಕೆ ದೊಡ್ಡ ಹೊಡೆತ ನೀಡಿದೆ. ಇದು ಈ ಭಾಗದಲ್ಲಿನ ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಈ ದಾಳಿಯ ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಟ್ರಂಪ್, "ಇರಾನ್ ತನ್ನ ಹಠಮಾರಿ ಧೋರಣೆ ಬಿಡಬೇಕು. ಅತಿ ಶೀಘ್ರದಲ್ಲಿ ಶಾಂತಿ ಒಪ್ಪಂದ ಮಾಡಿಕೊಳ್ಳುವುದು ಅವರಿಗೆ ಒಳ್ಳೆಯದು. ತಡವಾದಷ್ಟೂ ಇರಾನ್ ಅನುಭವಿಸುವ ನಷ್ಟ ಹೆಚ್ಚಾಗಲಿದೆ" ಎಂದು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now