ಕರ್ನಾಟಕ
ಕರ್ನಾಟಕದ ಇಬ್ಬರು ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ

ನವದೆಹಲಿ: ಈ ವರ್ಷ 32 ಮಕ್ಕಳಿಗೆ 'ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ' ನೀಡಿ ಅವರ ಅಸಾಧಾರಣ ಸಾಮರ್ಥ್ಯ ಮತ್ತು ಅಸಾಧಾರಣ ಸಾಧನೆಗಾಗಿ ಪ್ರಶಸ್ತಿ ನೀಡಲಾಗಿದೆ. ಆವಿಷ್ಕಾರ, ಸ್ಕಾಲಸ್ಟಿಕ್, ಕ್ರೀಡೆ, ಕಲೆ, ಸಂಸ್ಕೃತಿ, ಸಮಾಜ ಸೇವೆ, ಶೌರ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಸನ್ಮಾನಿಸಲಾಯಿತು.ಪ್ರಶಸ್ತಿ ಪುರಸ್ಕೃತರು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 32 ಜಿಲ್ಲೆಗಳವರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. 'ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಏಳು ಪ್ರಶಸ್ತಿಗಳು, ಆವಿಷ್ಕಾರಕ್ಕೆ ಒಂಬತ್ತು ಪ್ರಶಸ್ತಿಗಳು, ಸ್ಕೊಲಾಸ್ಟಿಕ್ ಸಾಧನೆಗಳಿಗೆ ಐದು ಪ್ರಶಸ್ತಿಗಳು ಲಭಿಸಿವೆ. ಕ್ರೀಡೆಯಲ್ಲಿ ಏಳು ಮಕ್ಕಳು, ಶೌರ್ಯಕ್ಕಾಗಿ ಮೂವರು ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಗೌರವ ನೀಡಲಾಗಿದೆ,' ಎಂದು ತಿಳಿಸಿದೆ.
ನಿಮ್ಮ ಬಳಿ ಇನ್ಮುಂದೆ 'ಈ ಆಪ್ ಇದ್ದರೆ ಸಾಕು' : ಅಧಾರ್, ವೋಟರ್, DL. RC ಸೇರಿದಂತೆ ಪ್ರಮುಖ ದಾಖಲೆಗಳು ಸೇಫ್…..!
ಅಂದ ಹಾಗೇ ಕರ್ನಾಟಕದ ದಕ್ಷಿಣ ಕನ್ನಡದ 15 ವರ್ಷದ ಕೆ.ರಾಕೇಶ್ ಕೃಷ್ಣ ಮತ್ತು ಬೆಂಗಳೂರಿನ 10 ವರ್ಷದ ವೀರ್ ಕಶ್ಯಪ್ಗೆ ಆವಿಷ್ಕಾರ ವಿಭಾಗದಲ್ಲಿ ಈ ಗೌರವ ಸಂದಿದೆ. ಯುವ ಸಾಧಕರನ್ನು ಅಭಿನಂದಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, '2021ರ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವು ವಿಜೇತರನ್ನು ಪ್ರೇರೇಪಿಸುವುದಲ್ಲದೆ, ಲಕ್ಷಾಂತರ ಯುವ ಮಕ್ಕಳನ್ನು ಕನಸು, ಆಕಾಂಕ್ಷೆಗಳನ್ನು ಮೂಡಿಸಲು ಪ್ರೋತ್ಸಾಹಿಸಲಿದೆ ಎಂದು ನಾನು ಆಶಿಸುತ್ತೇನೆ. ನಮ್ಮ ದೇಶವನ್ನು ಯಶಸ್ಸು ಮತ್ತು ಸಮೃದ್ಧಿಯ ಹೊಸ ಉತ್ತುಂಗಕ್ಕೆ ಕೊಂಡೊಯ್ಯಲು ನಾವೆಲ್ಲರೂ ನಮ್ಮ ವೈಯಕ್ತಿಕ ಪ್ರಯತ್ನಗಳನ್ನು ಮಾಡೋಣ. ಅಂತ ಹೇಳಿದರು. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಜೇತರಜತೆ ಸಂವಾದ ನಡೆಸಲಿದ್ದಾರೆ.
ಶಾಕಿಂಗ್ : ಮೂಢನಂಬಿಕೆಗೆ ದಾಸರಾಗಿ ಹೆತ್ತ ಮಕ್ಕಳನ್ನೇ ಕೊಲೆ ಮಾಡಿದ ತಂದೆ -ತಾಯಿ