Thursday, 29 Jul, 11.53 am Kannada News Now

ಕರ್ನಾಟಕ
Karnataka Politics : ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ, ಸಂಪುಟಕ್ಕೆ ಸೇರೋದಿಲ್ಲ - ಜಗದೀಶ್ ಶೆಟ್ಟರ್

ಬೆಂಗಳೂರು : ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಯಡಿಯೂರಪ್ಪ ಸಿಎಂ ಆಗಿದ್ದರಿಂದಾಗಿ ಸಚಿವ ಸ್ಥಾನದಲ್ಲಿದ್ದೆ. ನಾನು ಮಾಜಿ ಸಿಎಂ ಆಗಿಯೇ ಇರುತ್ತೇನೆ. ಸಚಿವ ಸಂಪುಟಕ್ಕೆ ಸೇರೋದಿಲ್ಲ ಎಂಬುದಾಗಿ ಮತ್ತೊಮ್ಮೆ ಮಾಜಿ ಸಿಎಂ ಜಗದೀಶ್ ಸ್ಪಷ್ಟ ಪಡಿಸಿದ್ದಾರೆ.

Karnataka Cabinet : ಇನ್ನೊಂದು ವಾರದಲ್ಲೇ ಸಂಪುಟ ರಚನೆ : ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಯಾರು ಇನ್.? ಯಾರು ಔಟ್.?

ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಸಿಎಂ ಬೊಮ್ಮಾಯಿ ಬಗ್ಗೆ ನಾನು ಯಾವುದೇ ಮಾತನಾಡೋದಿಲ್ಲ. ಅವರು ಹಿರಿಯರು, ಅನುಭವಿಗಳು. ಆದ್ರೇ ನಾನು ಮಾಜಿ ಸಿಎಂ ಆಗೇ ಇರೋದಕ್ಕೆ ಬಯಸುತ್ತೇನೆ. ಮತ್ತೆ ಸಚಿವ ಸಂಪುಟಕ್ಕೆ ಸೇರೋದಿಲ್ಲ ಎಂದರು.

ಕರಾವಳಿಯಲ್ಲೊಂದು ಅಪರೂಪದ ಘಟನೆ : ಸಾವಿನಲ್ಲೂ ಒಂದಾದ ಅಣ್ಣ-ತಂಗಿ

ಯಡಿಯೂರಪ್ಪ ಅವರು ಸಿಎಂ ಆಗಿದ್ದರಿಂದ, ಅವರ ಸಂಪುಟದಲ್ಲಿ ಇದ್ದೆ. ಸಿಎಂ ಬಸವರಾಜ ಬೊಮ್ಮಾಯಿ ಆಗಲಿ, ಬೇರೆ ಯಾರೇ ಸಿಎಂ ಆಗಿದ್ದರೂ ನಾನ ಸಚಿವ ಆಗ್ತಾ ಇರಲಿಲ್ಲ. ಸ್ವಾಭೀಮಾನ ಹಾಗೂ ಗೌರವದಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ಹಿರಿಯರಿಗೆ ಕೋಕ್ ನೀಡೋ ವಿಚಾರ ನನಗೆ ಗೊತ್ತಿಲ್ಲ ಎಂಬುದಾಗಿ ಹೇಳಿದರು.

Kukke Subramanya Temple : ಇಂದಿನಿಂದ 'ಸುಬ್ರಹ್ಮಣ್ಯ ದೇವಸ್ಥಾನ'ದಲ್ಲಿ 'ಸರ್ಪ ಸಂಸ್ಕಾರ' ಸೇವೆ ಆರಂಭDailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top