Saturday, 08 Aug, 8.47 am Kannada News Now

ಭಾರತ
ಕೇರಳಕ್ಕೆ ಕರಾಳ ಶುಕ್ರವಾರ : ಭೂಕುಸಿತ, ವಿಮಾನ ಅಪಘಾತಕ್ಕೆ 30 ಕ್ಕೂ ಅಧಿಕ ಮಂದಿ ಸಾವು

ಕೊಚ್ಚಿ : ಕೇರಳಕ್ಕೆ ಶುಕ್ರವಾರ ಕರಾಳವಾಗಿ ಮಾರ್ಪಟ್ಟಿದೆ. ಇಲ್ಲಿ ಪ್ರವಾಹದಿಂದ ಉಂಟಾದ ಭೂಕುಸಿತಗಳು ವಿಮಾನ ಅಪಘಾತ ನಡೆದು ಮೂವತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಕೇರಳ ಶುಕ್ರವಾರ ಒಂದೇ ದಿನದಲ್ಲಿ ಎರಡು ದುರಂತಗಳನ್ನು ಸಹಿಸಿಕೊಂಡಿದೆ.

ಕೇರಳದ ರಾಜಮಾಲಾದ ಪೆಟ್ಟಿಮುಡಿಯಲ್ಲಿ ಶುಕ್ರವಾರ ಮುಂಜಾನೆ ಭಾರಿ ಮಳೆಯಿಂದ ಉಂಟಾದ ಭೂಕುಸಿತವು ಚಹಾ ಎಸ್ಟೇಟ್ ಕಾರ್ಮಿಕರ ವಾಸದ ಘಟಕಗಳ ಮೇಲೆ ಬಿದ್ದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಜನರು ಭಗ್ನಾವಶೇಷಗಳಲ್ಲಿ ಸಿಲುಕಿದ್ದಾರೆ ಎಂದು ಪೊಲೀಸರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. .

ನಂತರ ಶುಕ್ರವಾರ ಸಂಜೆ, ಕೇರಳದ ಕೋಯಿಕೋಡ್ (ಕ್ಯಾಲಿಕಟ್) ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇಯಿಂದ ಹೊರ ಜಾರಿದ 190 ಜನರಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಅರ್ಧದಷ್ಟು ವಿಭಜನೆಯಾಯಿತು. ಈ ವಿಮಾನವು ವಿದೇಶಗಳಿಂದ ವಲಸಿಗರನ್ನು ಮರಳಿ ಕರೆತರಲು ಭಾರತದ "ವಂದೇ ಭಾರತ್" ಯೋಜನೆಯ ಪ್ರಯತ್ನದ ಭಾಗವಾಗಿತ್ತು.

ಮಾಜಿ ಭಾರತೀಯ ವಾಯುಪಡೆಯ (ಐಎಎಫ್) ಪರೀಕ್ಷಾ ಪೈಲಟ್ ಕ್ಯಾಪ್ಟನ್ ಡಿವಿ ಸಾಥೆ ಮತ್ತು ಅವರ ಸಹ ಪೈಲಟ್ ಸೇರಿದಂತೆ ಹತ್ತೊಂಬತ್ತು ಮಂದಿ ಮೃತಪಟ್ಟಿದ್ದು, ಗಾಯಾಳುಗಳು ಕ್ಯಾಲಿಕಟ್‌ನ ಮಿಮ್ಸ್ ಆಸ್ಪತ್ರೆ ಮತ್ತು ಬೇಬಿ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರವಾಹ, ಭೂಕುಸಿತ ಮತ್ತು ನಂತರ ಭಾರಿ ವಿಮಾನ ಅಪಘಾತದಿಂದ ಕೇರಳವು ಒಂದು ದಿನದಲ್ಲಿ ಎರಡು ದುರಂತಗಳನ್ನು ಅನುಭವಿಸಿದ್ದು, ಇದುವರೆಗೆ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top