Thursday, 22 Oct, 9.50 am Kannada News Now

ಕರ್ನಾಟಕ
ಖಾಸಗಿ ಸಂಸ್ಥೆಗಳಿಗೆ ಶೀಘ್ರದಲ್ಲೇ ಉಪಗ್ರಹ ವ್ಯವಸ್ಥೆ ಅಭಿವೃದ್ಧಿ, ಉಡಾವಣೆಗೆ ಅವಕಾಶ: ಕೆ. ಶಿವನ್‌

ಬೆಂಗಳೂರು: ಸ್ಪೇಸ್‌ಕಾಮ್ ಪಾಲಿಸಿ -2020 ಅಡಿಯಲ್ಲಿ ಭಾರತೀಯ ಖಾಸಗಿ ಸಂಸ್ಥೆಗಳಿಗೆ ಬಾಹ್ಯಾಕಾಶ ಸ್ವತ್ತುಗಳನ್ನು ಉಪಗ್ರಹ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು, ಉಪಗ್ರಹಗಳನ್ನು ಉಡಾಯಿಸಲು ಮತ್ತು ವಿದೇಶಿ ಗ್ರಾಹಕರಿಗೆ ಸೇವೆಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡಲಿದೆ.

ಈ ಬಗ್ಗೆ ಬಾಹ್ಯಾಕಾಶ ಇಲಾಖೆ ಹೊಸ ನೀತಿ ಮೂಲಕ ಪ್ರಸ್ತಾಪ ಮುಂದಿಟ್ಟಿದ್ದು, ಮುಂದಿನ ದಿನಗಳಲ್ಲಿ ಈ ನೀತಿ ಜಾರಿಗೆ ಬರುವ ಸಾಧ್ಯತೆ ಇದೆ. ಇನ್ನು ಬಾಹ್ಯಾಕಾಶದ ಬಳಕೆ ಸಂಬಂಧಪಟ್ಟ ಕರಡು ನೀತಿಯಲ್ಲಿ ಭಾರತದ ಕಂಪೆನಿಗಳಿಗೆ ವಿದೇಶಗಳಲ್ಲಿ ನಿಯಂತ್ರಣ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಸಾಗರೋತ್ತರ ಬಾಹ್ಯಾಕಾಶ ಸ್ವತ್ತುಗಳನ್ನು ಬಳಸಲು ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಕೆ. ಶಿವನ್‌, ಈ ಹೊಸ ನೀತಿಯು ನಮ್ಮ ಬಾಹ್ಯಾಕಾಶ ಸ್ವತ್ತುಗಳ ರಕ್ಷಣೆ, ಹೊಸ ಸ್ವತ್ತುಗಳ ರಚನೆ, ಮೇಲ್ವಿಚಾರಣೆ ಮತ್ತು ಕಾರ್ಯಾಚರಣೆಗಳ ವಿಷಯದಲ್ಲಿ ಈ ಹಿಂದೆ ಇದ್ದ ಸ್ಯಾಟ್‌ಕಾಮ್ ನೀತಿಯನ್ನು ಹೊಂದಿರುವ ಎಲ್ಲಾ ಗುಣವನ್ನು ಹೊಂದಿರುತ್ತದೆ. ಖಾಸಗಿ ವಲಯವನ್ನು ಪ್ರೋತ್ಸಾಹಿಸುವುದು ಮತ್ತು ರಾಷ್ಟ್ರೀಯ ಭದ್ರತಾ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ಗಮನ ಹರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top