Sunday, 11 Apr, 1.11 pm Kannada News Now

ಭಾರತ
ಕೊಚ್ಚಿ : ಉದ್ಯಮಿ ಪ್ರಯಣಿಸುತ್ತಿದ್ದ ಹೆಲಿಕಾಪ್ಟರ್ ಪತನ : ಉದ್ಯಮಿ ಸೇರಿ ಏಳು ಜನ ಅಪಾಯದಿಂದ ಪಾರು

ಕೊಚ್ಚಿ: ಅನಿವಾಸಿ ಭಾರತೀಯ ಉದ್ಯಮಿ ಎಂ.ಎ ಯೂಸುಫ್‌ ಆಲಿ ಸೇರಿ 7 ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ವೊಂದು ಭಾನುವಾರ ಬೆಳಿಗ್ಗೆ ಕೇರಳದ ಕೊಚ್ಚಿಯಲ್ಲಿ ಪತನಗೊಂಡಿದೆ.

ಲೂಲು ಗ್ರೂಪ್‌ನ ಸ್ಥಾಪಕ ಯೂಸುಫ್‌ ಆಲಿ, ಅವರ ಪತ್ನಿ ಮತ್ತು ಸಂಸ್ಥೆಯ ಮೂವರು ಸಿಬ್ಬಂದಿ ಹಾಗೂ ಗಗನಸಖಿಯರಿಬ್ಬರು ಲೂಲು ಗ್ರೂಪ್‌ನ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಸದ್ಯ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

'ಎಲ್ಲರೂ ಸುರಕ್ಷಿತರಾಗಿದ್ದಾರೆ. ಸದ್ಯ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ' ಎಂದು ಲೇಕ್‌ಶೋರ್‌ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದರು.



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top