ಕೋಲಾರ : ಖಾಸಗಿ ಶಾಲಾ ಶಿಕ್ಷಕಿಯಿಂದ ಯುಕೆಜಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆದಿದ್ದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ ಶಿಕ್ಷಕಿ ಕೀರ್ತನರಿಂದ ವಿದ್ಯಾರ್ಥಿನಿ ತೃಪ್ತಿ ಕೃಷ್ಣಾ ಮೇಲೆ ಹಲ್ಲೆ ನಡೆದಿದೆ. ವಿದ್ಯಾಪನ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆದಿದ್ದು, ಶಿಕ್ಷಕೀಯ ಹಲ್ಲೆಯಿಂದಾಗಿ ವಿದ್ಯಾರ್ಥಿನಿಯ ಗಲ್ಲದ ಬಳಿ ಗಾಯವಾಗಿದೆ.
ಬಾಲಕಿ ತಂದೆ ಕೃಷ್ಣಮೂರ್ತಿ ಮಾಸ್ತಿ ಪೊಲೀಸರಿಗೆ ಈ ಕುರಿತು ದವರು ನೀಡಿದ್ದಾರೆ. ಸ್ಥಳಕ್ಕೆ ಬಿಇಓ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆಯೂ ಕೂಡ ಇದೇ ರೀತಿ ಶಿಕ್ಷಕಿ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದರು. ವಿದ್ಯಾರ್ಥಿನಿಗೆ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಆರೋಪ ಕೇಳಿ ಬಂದಿದ್ದು, ಶಾಲಾ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ.

