Wednesday, 16 Sep, 5.41 pm Kannada News Now

ಭಾರತ
ಕೊರೊನಾ ಲಸಿಕೆ ನಿರೀಕ್ಷೆಯಲ್ಲಿರುವವರಿಗೆ ಗುಡ್‌ ನ್ಯೂಸ್‌: ಭಾರತೀಯರಿಗೆ ಸಿಹಿ ಸುದ್ದಿ ನೀಡಿದ ರಷ್ಯಾ..!

ನವದೆಹಲಿ: ಕೊರೊನಾ ಲಸಿಕೆ ನಿರೀಕ್ಷೆಯಲ್ಲಿರುವವರಿಗೆ ರಷ್ಯಾ ಸಿಹಿ ಸುದ್ದಿ ನೀಡಿದ್ದು, ರಷ್ಯಾದ ಸಾವರಿನ್ ಹೆಲ್ತ್ ಫಂಡ್ ಭಾರತದ ಕಂಪನಿಯೊಂದಕ್ಕೆ ಸ್ಪುಟ್ನಿಕ್ V ಲಸಿಕೆಯ 100 ಮಿಲಿಯನ್ ಡೋಸ್‌ಗಳನ್ನು ನೀಡುವುದಾಗಿ ತಿಳಿಸಿದೆ.

ಭಾರತದಲ್ಲಿ ಎರಡು ಸಂಸ್ಥೆಗಳು ಜಂಟಿಯಾಗಿ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಸಲಿದ್ದು, ರಷ್ಯಾದ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ ಕಜಕಿಸ್ತಾನ, ಬ್ರೆಜಿಲ್, ಮೆಕ್ಸಿಕೋ ಜತೆ ಒಪ್ಪಂದ ಮಾಡಿಕೊಂಡಿದೆ. ಎಲ್ಲ ದೇಶಗಳಿಗೆ ಸೇರಿ 300 ಮಿಲಿಯನ್ ಸ್ಪುಟ್ನಿಕ್ V ಲಸಿಕೆಯನ್ನು ನೀಡುವುದಾಗಿ ರಷ್ಯಾ ಹೇಳಿದೆ.

ಫೇಸ್‌ 3 ಟ್ರಯಲ್‌ನಲ್ಲಿ 40 ಸಾವಿರ ಸ್ವಯಂಸೇವಕರು ಪಾಲ್ಗೊಳ್ಳಲಿದ್ದು, ರಷ್ಯಾದಲ್ಲಿ ಮೂರನೇ ಹಂತದ ಲಸಿಕಾ ಪ್ರಯೋಗ ಚಾಲ್ತಿಯಲ್ಲಿದೆಯಾದ್ರೂ ಅಂತಿಮ ವರದಿ ಬರಬೇಕಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top