Wednesday, 27 Jan, 10.35 am Kannada News Now

ವಿಶ್ವ
ಕೊರೋನಾ ಸಮರ್ಥವಾಗಿ ನಿಭಾಯಿಸಲು ವಿಫಲ : ರಾಜೀನಾಮೆ ನೀಡಿದ ಇಟಲಿ ಪ್ರಧಾನಿ

ರೋಮ್: ಮಹಾಮಾರಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ನಿಯಂತ್ರಿಸಲು ವಿಫಲವಾಗಿದ್ದಕ್ಕೆ ತೀವ್ರ ಟೀಕೆಗಳು ಎದುರಾದ ಹಿನ್ನೆಲೆಯಲ್ಲಿ ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಕಾಂಟೆ ಅವರು ಮಂಗಳವಾರ ಅಧ್ಯಕ್ಷರ ಸೆರ್ಗಿಯೋ ಮ್ಯಾಟರೆಲ್ಲಾ ಅವರನ್ನು ಭೇಟಿ ಮಾಡಿ, ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ಇಟಲಿಯಲ್ಲಿ ಇದುವರೆಗೆ ಕೊರೋನಾ ವೈರಸ್‌ನಿಂದ 85,000 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಟೀಕೆಗಳು ಕೇಳಿ ಬಂದಿದ್ದವು.

ಕೆಂಪು ಕೋಟೆಗೆ ಮುತ್ತಿಗೆ ಹಾಕಲು ಪ್ರೇರೇಪಿಸಿದ ನಟ ದೀಪ್ ಸಿಧು ಬಿಜೆಪಿ ಸಂಸದ ಸನ್ನಿ ಡಿಯೋಲ್ ಮ್ಯಾನೇಜರ್ ಆಗಿದ್ದ !?

ಪ್ರಧಾನಿ ರಾಜೀನಾಮೆ ನೀಡಿದ ನಂತರ ಅಧ್ಯಕ್ಷರು ಹೊಸ ಸರ್ಕಾರ ರಚನೆಗೆ ಆದೇಶ ನೀಡುತ್ತಾರೆ. ಅದು ವಿಫಲವಾದಲ್ಲಿ, ಮತ್ತೊಬ್ಬರಿಗೆ ಈ ಅವಕಾಶ ನೀಡಲಾಗುತ್ತದೆ. ಅದೂ ವಿಫಲವಾದರೆ ಹೊಸದಾಗಿ ಚುನಾವಣೆ ನಡೆಯುತ್ತದೆ.



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top