Sunday, 11 Apr, 12.32 pm Kannada News Now

ಕರ್ನಾಟಕ
ಕೊರೋನಾ ಸೋಂಕಿತರಿಗೆ ಬೆಡ್ ನೀಡ 'ಮಹಾವೀರ ಜೈನ್ ಆಸ್ಪತ್ರೆ'ಗೆ ಬಿಬಿಎಂಪಿಯಿಂದ 'ಶೋಕಾಸ್ ನೋಟಿಸ್'

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಅಬ್ಬರ ಮುಂದುವರೆದಿದೆ. ನಿನ್ನೆ ಒಂದೇ ದಿನಕ್ಕೆ 4,384 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇಂತಹ ಸಂದರ್ಭದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗಾಗಿ ಬೆಡ್ ಮೀಸಲಿಡೋದು ಕೂಡ ಕಡ್ಡಾಯವಾಗಿದೆ. ಆದ್ರೇ ಈ ನಿಯಮ ಮೀರಿದಂತ ನಗರ ಮಹಾವೀರ ಜೈನ್ ಆಸ್ಪತ್ರೆಗೆ ಬಿಬಿಎಂಪಿ ಶೋಕಾಸ್ ನೋಟಿಸ್ ಜಾರಿ ಮಾಡಿ, ಬಿಸಿ ಮುಟ್ಟಿಸಿದೆ.

ಈ ಕುರಿತಂತೆ ಬಿಬಿಎಂಪಿಯ ಚೀಫ್ ಹೆಲ್ತ್ ಆಫೀಸರ್ ಮಹಾವೀರ ಜೈನ್ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಕೊರೋನಾ ಸೋಂಕಿತ ವ್ಯಕ್ತಿಯೊಬ್ಬರಿಗೆ ಸೂಕ್ತ ಬೆಡ್ ವ್ಯವಸ್ಥೆ ಮಾಡಿ, ಸಕಾಲದಲ್ಲಿ ಚಿಕಿತ್ಸೆ ನೀಡದ ಕಾರಣದಿಂದಾಗಿ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ. ಇಂತಹ ಪ್ರಕರಣ ಸಂಬಂಧ 24 ಗಂಟೆಯಲ್ಲಿ ವಿವರಣೆ ನೀಡುವಂತೆ ತಿಳಿಸಿದ್ದಾರೆ.

ಅಂದಹಾಗೆ ಬನಶಂಕರಿ ಮೂಲಕ ತಬರೇಜ್ ಎಂಬಾತ ಕೊರೋನಾ ಸೋಂಕಿನಿಂದಾಗಿ ಬಳಲುತ್ತಿದ್ದನು. ಇಂತಹ ವ್ಯಕ್ತಿ ಮಹಾವೀರ್ ಜೈನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೋವಿಡ್ ಬೆಡ್ ಕೂಡ ಬ್ಲಾಕ್ ಮಾಡಿದ್ದರು. ಆದ್ರೇ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಬೇಕಾಗಿದ್ದಂತ ಆಸ್ಪತ್ರೆ, ಸೂಕ್ತ ಚಿಕಿತ್ಸೆ ನೀಡದ ಕಾರಣ, ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದನು. ಇಂತಹ ಆಸ್ಪತ್ರೆಯ ವಿರುದ್ಧ ಬಿಬಿಎಂಪಿ ಅಧಿಕಾರಿಗಳಿಗೆ ಮೃತ ಸಂಬಂಧಿಕರು ದೂರು ನೀಡಿದ್ದರು.

ಈ ದೂರನ್ನು ಆಧರಿಸಿ, ಬಿಬಿಎಂಪಿಯ ಸಿಹೆಚ್‌ಓ ಶೋಕಾಸ್ ನೋಡಿಸ್ ಜಾರಿ ಮಾಡಿದ್ದು, ಪ್ರಕರಣ ಸಂಬಂಧ 24 ಗಂಟೆಯೊಳಗೆ ವಿವರಣೆ ನೀಡುವಂತೆ ತಿಳಿಸಿದೆ. ಒಂದು ವೇಳೆ ವಿವರಣೆ ನೀಡಲು ವಿಫಲವಾದ್ರೇ.. ಎನ್ ಡಿ ಎಂ ಎ ಕಾಯ್ದೆ ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸೋದಾಗಿ ಎಚ್ಚರಿಕೆ ನೀಡಿದೆ.Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top