Sunday, 22 Nov, 7.50 am Kannada News Now

ಭಾರತ
ಲವ್ ಜಿಹಾದ್ ಚರ್ಚೆ ನಡುವೆ, ಅಂತರ್ಧರ್ಮಿಯ ವಿವಾಹ ಪ್ರೋತ್ಸಾಹಿಸಲು 50,000 ರೂ ನೀಡಲು ಮುಂದಾದ ಉತ್ತರಾಖಂಡ್ ಸರ್ಕಾರ

ಡೆಹ್ರಾಡೂನ್: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಲವ್ ಜಿಹಾದ್ ವಿರುದ್ಧದ ಕಾನೂನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿರುವ ಮಧ್ಯೆ, ಇದೀಗ ಉತ್ತರಾಖಂಡ್ ಸರ್ಕಾರ ಅಂತರ್ಧರ್ಮೀಯ ವಿವಾಹವನ್ನು ಪ್ರೋತ್ಸಾಹಿಸಲು 50,000 ರೂಪಾಯಿ ನೀಡಲು ಮುಂದಾಗಿದೆ.

ಕಾನೂನಾತ್ಮಕವಾಗಿ­ ಮಾಡಿಕೊಳ್ಳುವ ಅಂತರ್ಧರ್ಮೀಯ ವಿವಾಹಗಳಿಗೆ ಪ್ರೋತ್ಸಾಹ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.

ಅಂತರ್ಜಾತಿಯ ವಿವಾಹದಲ್ಲಿ ಈ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ದಂಪತಿಯ ಪೈಕಿ ಒಬ್ಬರು ಸಂವಿಧಾನದ ಆರ್ಟಿಕಲ್ 341 ನಲ್ಲಿ ಉಲ್ಲೇಖಿಸಿರುವ ಪ್ರಕಾರ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕಾಗಿದೆ. ವಿವಾಹವಾದ ದಂಪತಿ ಒಂದು ವರ್ಷದ ಒಳಗಾಗಿ ಈ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ತಿಳಿದು ಬಂದಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top